Thursday, February 6, 2014

ಶ್ರೀ ಮನ್ ಮಧ್ವಾಚಾರ್ಯರು

                          ಶ್ರೀ
                ಶ್ರೀ ಮನ್ ಮಧ್ವಾಚಾರ್ಯರು
               ಶ್ರೀ ಮನ್ಮಧ್ವಾಚಾರ್ಯರು ಜಗತ್ತು ಕಂಡ ಅಪ್ರತಿಮ ತತ್ವಜ್ನಾನಿಗಳು. ಅಪಾರ ಪ್ರತಿಭೆ, ಅನುಪಮಪಾಂಡಿತ್ಯ, ಸಲ್ಲಕ್ಷಣಭರಿತದೇಹ, ಅಪಾರಭಗವದ್ಭಕ್ತಿ ಮತ್ತು ಸುಜನರ ಸಂಕಷ್ಟಗಳನ್ನು ಪರಿಹರಿಸಿ ಸಂತುಷ್ಟರನ್ನಾಗಿಸುವ ಕಾರುಣ್ಯ, ಮೂದಲಾದ ಸದ್ಗುಣಗಳಿಂದಾಗಿ ಅವರು ವಿಶ್ವದ ಅದ್ವೀತಿಯ ತತ್ವಪ್ರಚಾರಕ ಗುರುಗಳಾಗಿ ಮಾನ್ಯರೆನಿಸಿದ್ದಾರೆ. ಅವತರಿಸಿದ್ದು ಉಡುಪಿಯಬಳಿಯ ಪಾಜಕದಲ್ಲಿ. ಹಂಸನಾಮಕ ಪರಮಾತ್ಮನ ಪರಂಪರೆಯ ಪೀಠವನ್ನುಆರೋಹಿಸಿದರು.  ಅಚೆತುಹಿಮಾಚಲಪರ್ಯಂತ ಸಂಚರಿಸಿ ಸಕಲಶಾಸ್ತ್ರಗಳ ಸಾರರೂಪವಾದ ಸರ್ವಮೂಲಗ್ರಂಥಗಳನ್ನು ಬರೆದರು. ಸಕಲಶಾಸ್ತ್ರಗಳ ಮರ್ಮವನ್ನು ಉಪದೇಸಿಸಿದರು ಮತ್ತು ಪರಗತಿಯ ರಾಜಮಾರ್ಗವನ್ನು ತೂರಿಸಿದರು. ಅನಾದಿವೈಷ್ಣವವೇದಾಂತ "ತತ್ವವಾದ"ವನ್ನು ಪ್ರವರ್ತಿಸಿದರು. ಹಾಗು ಅದರ ಸತ್ ಪರಂಪರೆಯ ತತ್ವಪ್ರಸಾರಕ್ಕಾಗಿ ಪೀಠಗಳನ್ನು ಸ್ತಾಪಿಸಿದರು.

           ಶ್ರೀಪದ್ಮನಾಭತೀರ್ಥರಂತಹ ಪರಮಹಂಸರನ್ನು, ತ್ರಿವಿಕ್ರಮಪಂಡಿತಾಚಾರ್ಯರಂತಹ ಗೃಹಸ್ಥ ಶಿಖಾಮಣಿಗಳನ್ನು, ಜಯಸಿಂಹರಾಜನಂತಹ ಅರಸರನ್ನು, ಮೂದಲಾದ ಅಸಂಖ್ಯ ಸಿಷ್ಯವರ್ಗವನ್ನು ಸಂಪಾದಿಸಿದರು. ಜಿಜ್ನಾಸುಗಳಾಗಿ, ಆರ್ತರಾಗಿ ಬಂದ ಯಾರನ್ನೂಕೂಡಾ ದೂರಮಾಡದೇ ಕರೆದು ಉದ್ಧಾರ ಮಾಡಿದ ವಿಶ್ವಗುರುಗಳು ಇ ಮದ್ವಾಚಾರ್ಯರು. ವೇದ, ವೇದಾಂತ, ಶಿಕ್ಷಾ, ವ್ಯಾಕರಣ,ವೇದಾಂಗ, ತರ್ಕ, ಮಿಮಾಂಶ, ಸಂಗೀತ, ಶಾಸ್ತ್ರ, ಎಲ್ಲದರಲ್ಲೂ ಇವರು ಪರಿ"ಪೂರ್ಣಪ್ರಮತಿ". ಎಲ್ಲ ಧರ್ಮೀಯರನ್ನೂ ತತ್ವಾರ್ಥಗರ್ಭಿತ ಅಪೂರ್ವ ಮಾತುಗಾರಿಕೆಯಿಂದಾ ಕ್ಷಣಕಾಲದಲ್ಲಿ ಪ್ರಭಾವಿತರನ್ನಾಗಿಸಬಲ್ಲ ಅನ್ಯಾದೃಶ ಯೋಗಶಕ್ತಿ ಅವರದ್ದು. ಅವರು ಅನುಪಮ ವಿದ್ವಾಂಸರು, ಬ್ರಹ್ಮಸಾಕ್ಷಾತ್ಕಾರ ಮಾಡಿಕೂಂಡದಾರ್ಶನಿಕರು, ವೇದದೃಷ್ಟಾರಋಷಿಗಳು, ತತ್ವೋಪದೇಶಕ ಗುರುಗಳು, ಅದ್ವೀತಿಯ ವಾಗ್ಮಿಗಳು, ವೈವಿಧ್ಯಮಯಗ್ರಂಥಕಾರರು, ಅಪೋರ್ವ ಸಂಶೋಧಕರು, ಅಪ್ರತಿಮ ವಾದಕೋವಿದರು, ಅಪೂರ್ವ ಅನುಭಾವಿಗಳು, ತತ್ವಜ್ನಾನದರಸಋಷಿಗಳು, ಸಕಲಭಾಷಾಕೋವಿದರು, ಅಪೂರ್ವಭಾಷಾಶಾಸ್ತ್ರಜ್ನರು, ಮಹಾ ತಪಸ್ವಿಗಳು, ಅನುಪಮ ಗಾನಕೋವಿದರು, ಪುರಾತತ್ವ ಶಾಸ್ತ್ರನ್ಜ್ಯರು, ಮೀಮಾಂಶಾದಿ ಸಕಲಶಾಸ್ತ್ರವಿಶಾರದರು, ಸಮರ್ಥಾಅಡಳಿತಗಾರರು, ಅಸಮಾನ್ಯ ಸಂಘಟನಾ ಚತುರರು, ಮತ್ತು ವಿಶಾಲಹೃದಯದ ಸಮಾಜ ಸುಧಾರಕರು.

       ಮಾಘ ಶುಕ್ಲ ನವಮಿಯಂದು ಶ್ರೀ ಮಧ್ವಾಚಾರ್ಯರು ಬದರಿಗೆ ಪ್ರಯಾಣ ಮಾಡಿದರು. ಮಧ್ವವಿಜಯ, ವಾಯುಸ್ತುತಿ, ಪವಮಾನಸೂಕ್ತ ಪಾರಾಯಣಾದಿಗಳು ವಿಹಿತವಾಗಿದೆ. ಶ್ರೀ ಮಧ್ವರು ಮಾನವದೃಷ್ಟಿಯಿಂದಾ ೭೯ವರ್ಷ ದೃಶ್ಯರಾಗಿದ್ದು ಪಿಂಗಲ ಸಂವತ್ಸರದ ಮಾಘ ಶುದ್ಧ ನವಮಿಯಂದು ದೂಡ್ಡಬದರಿಗೆ ಹೂದರು. ಅದೃಶ್ಯರಾಗಿ ಉಡುಪಿಯಲ್ಲಿಯೂ, ದೃಶ್ಯರಾಗಿ ಬದರಿಯಲ್ಲಿಯೂ ಇದ್ದು ಮಾನವರಲೆಕ್ಕದಂತೆ ಮೂವತ್ತಾರು(೩೬)ಸಾವಿರ ವರ್ಷಗಳು ಮುಗಿದಾಗ ಮೂಲರೂಪಕ್ಕೆ ಹೋಗಿ ಸೇರುವರು. ಇ ದಿನವು ಮಹಾನಂದವನ್ನು ಉಂಟುಮಾಡುವದರಿಂದಾ "ಮಹಾನಂದಾ ನವಮಿ" ಎಂದೂ ಹೇಳಲ್ಪಟ್ಟಿದೆ. ಇಂದು ಮಾಡುವ ಸ್ನಾನ, ದಾನ, ಜಪ, ಹೋಮ, ಉಪವಾಸ, ಮೂದಲಾದವುಗಳು ಅಕ್ಷಯಫಲವನ್ನು ನೀಡುವವು. ಅವರು ಮಾಡಿದ ಭಾಷ್ಯಗಳ ಅಭಿಪ್ರಾಯಗಳನ್ನು ಯಾರು ಪುನ: ಪುನ: ಆವೃತ್ತಿ ಮಾಡುವರೋ ಅವರು ಮೋಕ್ಷವನ್ನು ಹೂಂದುವರು.