Tuesday, August 27, 2013

ಶ್ರಾವಣ ಮಾಸ ಮಹಾತ್ಮೆ - ೨

 
೭) ದೂರ್ವಾಗಣಪತಿವೃತ - ಶ್ರಾವಣ ಮಾಸದ ಚತುರ್ಥಿಯಂದು "ದೂರ್ವಾಗಣಪತಿ" ವೃತವನ್ನು ಆಚರಿಸಬೇಕು. ಮಣ್ಣಿನ ಗಣಪತಿಯನ್ನು ಮಾಡಿ ಪೀಠದ ಮೇಲೆ ದೂರ್ವೆಗಳನ್ನು ಹರಡಿ ಅದರ ಮೇಲೆ ಗಣಪತಿಯನ್ನು ಕೂಡಿಸಬೇಕು. "ಗಣಾನಾಂತ್ವಾ ಎಂಬ ಮಂತ್ರದಿಂದಾ ಆವ್ಹಾನಿಸಿ ಷೂಡಷೂಪಚಾರದಿಂದಾ ಪೂಜಿಸಬೇಕು. ಕೆಂಪು ಬಣ್ಣದ ಹೂವು ಗಳಿಂದಾ, ದೂರ್ವಾದಿಂದಾ ನಾಮಪೂಜೆಯೂಂದಿಗೆ ಏರಿಸಬೇಕು. ಗಣೇಶಾಥರ್ವ ಪಾರಾಯಣವನ್ನು ಮಾಡಿ, ಸಾಧ್ಯವಾದಲ್ಲಿ ದೂರ್ವೆ, ಕಡಬುಗಳಿಂದಾ ಹೋಮಿಸಬೇಕು. ಈ ವೃತವು ಸರ್ವವಿಘ್ನಗಳನ್ನು ಪರಿಹರಿಸುತ್ತದೆ.

೮) ಅನಂತ ವೃತ - ಶ್ರಾವಣ ಚತುರ್ಥಿಯಂದು ಅನಂತನ ಪೂಜೆಯನ್ನು ಮಾಡಬೇಕು. ಹದಿಮೂರು ಗ್ರಂಥಿಗಳುಳ್ಳ ಅನಂತನ ದಾರವನ್ನು ಮಾಡಿ ಪೂಜಿಸಿ ಬಲಹಸ್ತದಲ್ಲಿ ಕಟ್ಟಿಕೂಳ್ಳಬೇಕು.

ಇಂದು ವರಾಹ ಜಯಂತಿಕೂಡಾ ಆಚರಿಸಬೇಕು.

೯) ನಾಗ ಚತುರ್ಥಿ ವೃತ - ನಾಗ ಚತುರ್ಥಿಯಂದು ಹೆಣ್ಣುಮಕ್ಕಳು ಅಭ್ಯಂಜನಸ್ನಾನ ಮಾಡಬೇಕು ನಾಗದೆವತೆಯ ಅಂತರ್ಯಾಮಿಯಾದ ಸಂಕರ್ಷಣನನ್ನು ಮನೆಯ ಮುಂದೆ ಬಾಗಿಲಿಗೆ ಕೆಮ್ಮಣ್ಣಿನಿದಾಗಲಿ, ಗೋಮಯದಿಂದಾಗಲಿ ನಾಗನನ್ನು ಬರೆದು ಆವಾಹಿಸಿ ಅಭಿಷೇಕ ಮಾಡಿ ಗಂಧ,ದೂರ್ವಾ, ಹಳದಿಗೆಜ್ಜೆವಸ್ತ್ರಾದಿಗಳಿಂದಾ ಪೂಜಿಸಿ ಬೆಲ್ಲದನೀರು (ಹಾಲು)ಎರೆಯಬೇಕು, ಹಸಿಕಡಲೇಕಾಳು, ಅರಳು,ಹಸಿಚಿಗಳೆ, ತಂಬಿಟ್ಟು ಮುಂತಾದವುಗಳಿಂದಾ ನಿವೇದಿಸಬೇಕು. ನಂತರ ಫಲಹಾರ ಮಾಡಬಹುದು ಅಂದು ನಾರಿಯರು ಉಪವಾಸ ಮಾಡಬೇಕು.

೧೦) ನಾಗ ಪಂಚಮಿ - ಇಂದು ಐದು ಹೆಡೆಗಳುಳ್ಳ ನಾಗನನ್ನು ಮೃತಿಕೆಯಿಂದಾ ಮಾಡಿ ಅದರಲ್ಲಿ ಶೇಷಾಂತರ್ಯಾಮಿಯಾದ ಸಂಕರ್ಣನನ್ನು ಆವಾಹಿಸಿ ಷೂಡಷೂಪಚಾರಗಳಿಂದಾ ಪೂಜಿಸಿ (ಇಂದು ಕೆಂಪು ಗೆಜ್ಜೆವಸ್ತ್ರ) ಹಿಂದೆಹೇಳಿದ ಪೂಜಾದ್ರವ್ಯಗಳಿಂದಾ ಅಲಂಕಾರ ನಿವೆದನೆಗಳನ್ನು ಮಾಡಬೇಕು. ಇಂದು ಹಸುವಿನ ಹಾಲನ್ನು ಎರೆಯಬೇಕು. ಇಂದು ಮಾತ್ರ ಸ್ತ್ರೀಯರು ತೆಂಗಿನಕಾಯಿಗಳನ್ನು ಒಡೆಯಬಹುದು.

೧೧) ಗರುಡ ಪಂಚಮಿ - ಗರುಡನು ದೇವಲೋಕದಿಂದಾ ಅಮೃತವನ್ನು ತಂದು ನಾಗಗಳಿಗೆ ಕೊಟ್ಟು ನಾಗಗಳ ಬಾಯಿಯಿಂದಲೇ "ನೀನು,ಮತ್ತು ನಿನ್ನ ತಾಯಿ ವಿನತೆಯು ದಾಸ್ಯದಿಂದಾ ಮುಕ್ತರಾಗಿರುವಿರಿ" ಎಂದು ಹೇಳಿದ ದಿವಸವಿದು.

೧೨) ಸಿರಿಯಾಳ ಷಷ್ಟೀ - ಇದಿವಸ ಮೂಸರನ್ನಕ್ಕೆ ವಿಶೇಷ ಪ್ರಾಧಾನ್ಯ. ಮನೆಯಲ್ಲಿರುವ ಕನ್ಯರಿಂದಾ ಮೂಸರನ್ನ, ಮೂಸರ ಅವಲ್ಲಕ್ಕಿ, ಉಪ್ಪಿನಕಯಿಗಳನ್ನು ಸಂಕ್ರಾಂತಿಯಲ್ಲಿ ಯಳ್ಳು ಬೆಲ್ಲಾ ಬೀರಿದಂತೆ ಮನೆ ಮನೆಗಳಿಗೆ ಬಿರಬೇಕು. ಅಂದು ಭಗವಂತನಿಗೆ ಕೂಡಾ ಶಾವಿಗೆ ಪಾಯಸ, ಮೂಸರನ್ನ, ಮೂಸರವಲಕ್ಕಿ, ಉಪ್ಪಿನಕಾಯಿಗಳನ್ನು ನಿವೇದಿಸಬೇಕು. ಹಾಗು ಇವೆಲ್ಲವುಗಳನ್ನು ಒಂದು ಬಾಳೆಯಲಿಯಲ್ಲಿ ಹಾಕಿ ಬುತ್ತಿ ಕಟ್ಟಿದಂತೆ ಕಟ್ಟಿ ದಾನ ಕೂಡಬೇಕು. ಹಾಗು ಸಂಜೆ ಸ್ಕಂದ ಜನ್ಮ ವೃತ್ತಾಂತವನ್ನು ಕೇಳಬೇಕು. ಇದರಿಂದಾ ಅವರ ಭಾವಿ ಜೀವನ ಹಸನಾಗಿರುತ್ತದೆ.

೧೩,೧೪) ಅವ್ಯಂಗವೃತ - ಶ್ರಾವಣ ಶುಧ ಸಪ್ತಮಿಯನ್ನು ಶೀತಲಾ ಸಪ್ತಮಿಯಂದು ಕರೆಯುವರು. ಸಪ್ತಮಿ ಹಸ್ತಾ ನಕ್ಷತ್ರದಿಂದಾ ಕೂಡಿದ್ದರೆ "ಪಾಪನಾಶಿನಿ" ಯಂದು ಕರೆಯಲ್ಪಡುವದು. ಇಂದು ಗೋಡೆಯ ಮೇಲೆ ಭಾವಿಯ ಚಿತ್ರ, ಏಳು ಜಲದೇವತೆಗಳು, ಇಬ್ಬರು ಬಾಲಕರು, ಮೂವರು ಸ್ತ್ರೀಯರು, ಅಶ್ವ, ವೃಷಭ, ನರವಾಹನ, ಪಲ್ಲಕ್ಕಿ ಇವುಗಳ ಚಿತ್ರ ಬರೆಯಬೇಕು. ಅದರ ಕೆಳಗಡೆ ಕಲಶ ಸ್ತಾಪನೆಮಾಡಬೇಕು. ಅದರಲ್ಲಿ ಸೂರ್ಯಾಂತರ್ಗತ ನಾರಾಯಣನನ್ನು ಆವಾಹಿಸಿ ಪೂಜಿಸಿ ಸೌತೆಕಾಯಿ, ಮೂಸರನ್ನ ನಿವೇದನೆ ಮಾಡಬೇಕು. ಹಾಗು ಕಲಶದ ಮೇಲೆ ಹೂದೆಸಿದ ವಸ್ತ್ರವನ್ನು ವಿಪ್ರರಿಗೆ ದಕ್ಷಿಣಿ ಸಹಿತ ದಾನ ಕೂಡಬೇಕು. ಈ ರೀತಿಯಾಗಿ ೭ ವರ್ಷ ಪರ್ಯಂತ ಮಾಡಬೇಕು. ಇದರಿಂದಾ ಜೀವನದಲ್ಲಿ ಬರುವ ತಾಪತ್ರಯಗಳು ಶಾಂತವಾಗುವವು.

೧೫) ಪುತ್ರದಾ ಏಕಾದಶಿವೃತ - ಶ್ರಾವಣ ಶುಕ್ಲ ಏಕಾದಶಿಗೆ ಪುತ್ರದಾ ಏಕಾದಶಿ ಎಂದು ಹೆಸರು. ಈ ದಿನ ವಿಧಿ ಪೂರ್ವಕವಾಗಿ ಉಪವಾಸವನ್ನು ಮಾಡಿ ದ್ವಾದಸಿ ದಿನದಂದು ಯೂಗ್ಯ ಬ್ರಾಹ್ಮಣನಿಗೆ ಭೂಜನ ಮಾಡಿಸಿ ದಕ್ಷಿಣಿ ಕೂಟ್ಟು ತಾನು ಪ್ರಸಾದ ಸ್ವೀಕರಿಸಬೇಕು. ಇದರಿಂದಾ ಸತ್ಪುತ್ರರು ಜನಿಸುವರು.

೧೬) ನ ಕರೋತಿ ವಿಧಾನೇನ ಪವಿತ್ರಾರೋಪಣಂ ತು ಯ:|

ತಸ್ಯ ಸಂವತ್ಸರೀಪೂಜಾ ನಿಷ್ಪಲಾ ಮುನಿಸತ್ತಮಂ ||

ಶ್ರಾವಣ ಶುಕ್ಲ ದ್ವಾದಶೀಯಂದು ಪವಿತ್ರಾರೋಪಣವೆಂಬ ಮಾಡಬೇಕು.ಇದರಿಂದಾ ತಾನು ಪ್ರತಿ ದಿನವು ಮಾಡುತ್ತಿರುವ ದೇವರ ಪೂಜೆಯು ಫಲವನ್ನು ಕೂಡುವದು. ಇಲ್ಲದಿದ್ದರೆ ಆ ವರ್ಷ ಪರ್ಯಂತರ ಮಾಡಿದ ಪೂಜೆಯು ನಿಷ್ಫಲವಾಗುವದು.

೧೭) ದುರ್ಗಾಷ್ಟಮಿ - ಇಂದು ದುರ್ಗಾ ದೇವಿಯನ್ನು ಪೂಜಿಸಿ ಏಂಟು ಬತ್ತಿಗಳುಳ್ಳ ದೀಪವನ್ನು ಬೆಳಗಿ ೧೦೮ ಪ್ರದಕ್ಷಿಣಿ ನಮಸ್ಕಾರವನ್ನು ಹಾಕಬೇಕು. ಹಾಗು ದೀಪವನ್ನು ಬ್ರಾಹ್ಮಣನಿಗೆ ದಾನ ಕೂಡಬೇಕು. ಇದರಿಂದಾ ಕನ್ನೆಯರಿಗೆ, ವರಗಳಿಗೆ ಯೋಗ್ಯವಾದ ಜೋಡಿಯೊಂದಿಗೆ ಶೀಘ್ರವಾಗಿ ಲಗ್ನವಾಗುವದು.
೧೮) ಕೃಷ್ಣಾಷ್ಟಮಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.೧೯) ವಾಮನ ಜಯಂತಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.
 
 

Monday, August 19, 2013

ಉಪಾಕರ್ಮ


ಉಪಾಕರ್ಮ

ಉಪಾಕರ್ಮವನ್ನು ಶ್ರಾವಣಮಾಸದಲ್ಲಿರುವ ಬರುವ ಶ್ರವಣಾ ನಕ್ಷತ್ರದ ದಿನದಂದು ಋಗ್ವೇದಿಗಳು, ಶ್ರಾವಣ ಶುಕ್ಲದ ಪೂರ್ಣಿಮಾದಂದು ಯಜುರ್ವೇದಿಗಳು ಉಪಾಕರ್ಮ ವನ್ನು ಮಾಡಿಕೊಳ್ಳಬೇಕು. ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.
ಅಲ್ಲದೇ! ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ. ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆ ಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರ ಬೇಕೆಂದು ತಿಳಿ ಹೇಳುತ್ತದೆ. ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗ ವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವ ಸಂಕೇತ.
ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
 




ಉತ್ಸರ್ಜನ - ಉಪಾಕರ್ಮ ಎಂದರೇನು?

ಉತ್ಸರ್ಜನ ಎಂದರೆ ಬಿಡುವುದು ಎಂದರ್ಥ. ಯಾವುದನ್ನು ಬಿಡುವುದು ಎಂದರೆ ವೇದ ಗಳನ್ನು ಬಿಡುವುದು ಎಂದರ್ಥ. ಇದೇನಿದು ವೇದಗಳನ್ನು ಬಿಡುವುದು ಎಂದರೆ ಎನ್ನುವ ಸಂಶಯ ಬಂದರೆ ಇದಕ್ಕೆ ಹಿನ್ನೆಲೆ ಹೀಗಿದೆ - ಹಿಂದೆ ವೇದಕಾಲದಲ್ಲಿ ಋಷಿ-ಮುನಿಗಳು ವರ್ಷಪೂರ್ತಿ ವೇದಾಭ್ಯಾಸವನ್ನು ಮಾಡುತ್ತಿರಲಿಲ್ಲ. ಅದರಲ್ಲಿ ಸ್ವಲ್ಪ ದಿನಗಳ ಕಾಲ ವೇದಾಭ್ಯಾಸವನ್ನು ಬಿಟ್ಟು ವೇದದ ಅಂಗಗಳಾದ ಇನ್ನಿತರೇ ಶಾಸ್ತ್ರಗಳ ಅಧ್ಯಯನದಲ್ಲಿ, ಕೃಷ್ಯಾದಿಗಳಿಂದ ತಮ್ಮ ಉಪಜೀವನ ಕ್ಕೆ ಬೇಕಾದ ಧಾನ್ಯಸಂಗ್ರಹದಲ್ಲಿ ತೊಡಗುತ್ತಿದ್ದರು. ಅಂತಹ ಸಮಯದಲ್ಲಿ ವೇದಾಧ್ಯಯನವು ಅವಿಚ್ಛಿನ್ನವಾಗಿ ನಡೆಯಲು ಅಸಾಧ್ಯವಾದುದರಿಂದ, ಅಲ್ಲದೇ

ಅಧ್ಯಾಯೋತ್ಸರ್ಜನಂ ಮಾಘ್ಯಾಂ ಪೌರ್ಣಮಾಸ್ಯಾಂ ವಿಧೀಯತೇ |
ಅತ ಆರಭ್ಯ ಷಣ್ಮಾಸಾನ್ ಷಡಂಗಾನಿ ವಿಧೀಯತೇ ||

ಎನ್ನುವ ಪ್ರಮಾಣ ಶ್ಲೋಕ ದಿಂದ ಮಾಘ ಶುಕ್ಲ ಪೂರ್ಣಿಮಾದಂದು ವೇದಾಧ್ಯಯನವನ್ನು ಉತ್ಸರ್ಜನೆ ಮಾಡಿ (ಬಿಟ್ಟು) ವೇದದ ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂಧಶ್ಶಾಸ್ತ್ರ, ನಿರುಕ್ತ, ಜ್ಯೋತಿಷ್ಯಶ್ಶಾಸ್ತ್ರ, ಕಲ್ಪ ಎನ್ನುವ ವಿದ್ಯೆಗಳನ್ನು ಕಲಿಯಲು ಪ್ರಾರಂಭಿಸುತ್ತಿದ್ದರು. ಈ ರೀತಿಯಾಗಿ ನಿರಂತರವಾಗಿ ವೇದದ ಅಧ್ಯಯನ ವನ್ನು ಬಿಡುವುದಕ್ಕೆ‘ಉತ್ಸರ್ಜನ‘ ಎಂದು ಕರೆಯುತ್ತಿದ್ದರು. ಅಂತಹ ಸಮಯದಲ್ಲಿ ವೇದ ಮಂತ್ರ ಗಳ ಅಧ್ಯಯನವು ಲೋಪವಾಗಿ ಆ ವೇದಮಂತ್ರಗಳಿಗೆ ಯಾತಯಾಮತಾ (ಒಂದು ಯಾಮ ದಷ್ಟು ಕಾಲ ಮೀರುವುದು) ದೋಷವು ಬರುತ್ತಿತ್ತು. ಅಂತಹ ದೋಷವು ಕಳೆದು ವರ್ಣಾಶ್ರಮೋಕ್ತ ಕರ್ಮಗಳು ವೀರ್ಯವತ್ತಾಗಿ ಫಲ ಕೊಡಬೇಕಾದರೆ ಆಯಾಯಾ ಶಾಖೆಯವರು ಸ್ವಶಾಖೋಕ್ತ ವಿಧಿಯಿಂದ ಶ್ರಾವಣ ಶುಕ್ಲ ಪೂರ್ಣಿಮಾ ಅಥವಾ ಶ್ರವಣ ನಕ್ಷತ್ರದ ದಿನದಂದು ವೇದದ್ರಷ್ಟಾರ ರಾದ ಋಷಿಗಳನ್ನು ಪೂಜಿಸಿ, ಅವರ ಅನುಗ್ರಹದಿಂದ ನೂತನ ಯಜ್ಞೋಪವೀತವನ್ನು ಧಾರಣೆ ಮಾಡಿ ಪುನಃ ವೇದಾಧ್ಯಯನ - ಅಧ್ಯಾಪನವನ್ನು ಸ್ವೀಕರಿಸುವುದಕ್ಕೆ ‘ಉಪಾಕರ್ಮ‘ ಎಂದು ಕರೆಯುತ್ತಿದ್ದರು. ಈ ರೀತಿಯಾಗಿ ಉಪಾಕರ್ಮವನ್ನು ಏಕೆ ಮಾಡಬೇಕೆಂದರೆ ’ಅಯಾತಯಾಮ ಛಂದೋಭಿಃ ಯತ್ಕರ್ಮಸಿದ್ಧಿಕಾರಣಮ್‘ ಎಂದು ಹೇಳಿರುವುದರಿಂದ ನಾವು ಮಾಡುವಂತಹ ಕರ್ಮಗಳು ಸಿದ್ಧಿಯಾಗಬೇಕಾದರೆ ಅಯಾತಯಾಮ (ಯಾತಯಾಮತಾ ದೋಷವಿಲ್ಲದಿರುವ) ಮಂತ್ರಗಳಿಂದ ಮಾತ್ರ ಸಾಧ್ಯ. ಆದುದರಿಂದ ಮಾಘ ಮಾಸದಲ್ಲಿ ಉತ್ಸರ್ಜನವನ್ನು, ಶ್ರಾವಣ ಮಾಸದಲ್ಲಿ ಉಪಾಕರ್ಮವನ್ನು
ಅವಶ್ಯವಾಗಿ ಮಾಡಲೇಬೇಕು.
ಆದರೆ ಪ್ರಕೃತದಲ್ಲಿ ಶ್ರಾವಣ ಮಾಸ ದಲ್ಲಿಯೇ ಉತ್ಸರ್ಜನ - ಉಪಾಕರ್ಮ ಎರಡನ್ನೂ ಮಾಡುವ ಸಂಪ್ರದಾಯವು ಬೆಳೆದು ಬಂದಿದೆ. ಆ ದಿನ ಋಗ್ವೇದಿಗಳು ಅರುಂಧತೀ ಸಹಿತರಾದ ಸಪ್ತರ್ಷಿಗಳನ್ನು, ಯಜುರ್ವೇದಿಗಳು ನವಕಾಂಡ ಋಷಿಗಳನ್ನು ಸ್ಥಾಪನೆ ಮಾಡಿ, ಷೋಡಶೋಪಚಾರ ಪೂಜೆಗಳಿಂದ, ಚರುವಿನಿಂದ ಹೋಮವನ್ನು ಮಾಡಿ, ಉತ್ಸೃಷ್ಟಾಃ ವೈ ವೇದಾಃ ಎಂದು ವೇದವನ್ನು ತ್ಯಾಗ ಮಾಡಿ, (ಮಂತ್ರ) ಸ್ನಾನವನ್ನು ಮಾಡಿ, ಉತ್ಸರ್ಜನಾಂಗವಾಗಿ ದೇವರ್ಷಿಪಿತೃ ತರ್ಪಣವನ್ನು ಕೊಟ್ಟು ಸ್ಥಾಪಿಸಿದ ಋಷಿಗಳನ್ನು ಉದ್ವಾಸನೆ ಮಾಡಿ ಕೃಷ್ಣಾರ್ಪಣವನ್ನು ಬಿಡಬೇಕು. ಆನಂತರ ಪುನಃ ಋಷಿಗಳನ್ನು ಆಹ್ವಾನಿಸಿ, ಪೂಜೆ, ಯಜ್ಞೋಪವೀತ ಸಹಿತವಾದ ಹೋಮವನ್ನು ಮುಗಿಸಿ, ಉಪಕೃತಾಃ ವೈ ವೇದಾಃ ಎಂದು ಉದ್ಘೋಷಿಸಿ, ಋಷಿಗಳ ಅಪ್ಪಣೆ ಪಡೆದು ವೇದಗಳನ್ನು ಸ್ವೀಕರಿಸಿ, ಹೋಮಶೇಷವಾದ ಸಕ್ತು (ಹಿಟ್ಟನ್ನು) ವನ್ನು ಭಕ್ಷಿಸಿ, ಯಜ್ಞೋಪವೀತ ದಾನ, ಧಾರಣೆ, ಬ್ರಹ್ಮಯಜ್ಞವನ್ನು ಮುಗಿಸಿ ಮಾಡಿದ ಕರ್ಮವನ್ನು ಭಗವಂತನಿಗೆ ಸಮರ್ಪಿಸಿ, ಭಗವಂತನ ಅನುಗ್ರಹವನ್ನು ಪಡೆಯುವುದೇ ಉಪಾಕರ್ಮದ ಉದ್ದೇಶ.

Sunday, August 11, 2013

ಶ್ರಾವಣ ಮಾಸ

                       
ಶ್ರಾವಣ ಮಾಸವು ಶ್ರೀಧರ ಹಾಗು ಶ್ರೀ ಧನ್ಯ ದೇವತೆಯುಳ್ಳದ್ದು. ಪೂರ್ಣಿಮಾದಲ್ಲಿ ಶ್ರವಣಾ ನಕ್ಷತ್ರದ ಯೋಗವಿರುವಾಗ ಶ್ರಾವಣ ಮಾಸವು ಬರುತ್ತದೆ. ಶ್ರಾವಣದಲ್ಲಿ ಮಾಡಿದ ಭಗವನ್ಮಹಿಮೆಯ ಮಂತ್ರಸಿದ್ಧಿಯನ್ನು ಕೊಡುವದರಿಂದಲೂ ಶ್ರಾವಣಮಾಸ ಯನಿಸಿದೆ. ಶ್ರಾವಣಮಾಸದ ಯಾವ ದಿನವೂ ವೃತರಹಿತವಾಗಿಲ್ಲಾ. ಒಂದು ದಿನವೂ ವೃತ ಮಾಡದೇ ಶ್ರಾವಣವನ್ನು ಯಾರು ಕಳೆಯುವರೋ ಅವರು ನರಕವನ್ನು ಹೊಂದುವರು.

ವೃತಗಳು-
೧) ಏಕ ಭುಕ್ತವೃತ.
೨) ಮಂಗಳ ಗೌರಿ ವೃತ.
೩) ಬುಧ,ಭ್ರಹಸ್ಪತಿ ವೃತ.
೪) ಜೀವಂತಿಕಾ ವೃತ.
೫) ಶನೇಶ್ವರ ವೃತ.
೬) ರೋಟಿಕಾ ವೃತ.
೭) ದೂರ್ವಾಗಣಪತಿ ವೃತ.
೮) ಅನಂತ ವೃತ.
೯) ನಾಗಚತುರ್ಥಿ
೧೦) ನಾಗ ಪಂಚಮಿ
೧೧) ಗರುಡ ಪಂಚಮಿ.
೧೨) ಸಿರಿಯಾಳ ಷಷ್ಟಿ.
೧೩) ಅವ್ಯಂಗ ವೃತ.
೧೪) ಶೀತಲಾಸಪ್ತಮಿ ವೃತ.
೧೫) ಪುತ್ರದಾ ಏಕಾದಶಿ ವೃತ.
೧೬) ಪವಿತ್ರಾರೋಪಣವೃತ
೧೭) ದುರ್ಗಾಷ್ಟಮಿ.
೧೮) ಕೃಷ್ಣಾಷ್ಟಮಿ.
೧೯) ವಾಮನ ಜಯಂತಿ.
೨೦) ಅಗಸ್ತ್ಯಾರ್ಘ್ಯ
೨೧) ಮಹಾಲಕ್ಷ್ಮೀವೃತ.

೧) ಏಕಭುಕ್ತ ವೃತ-
ದಿನಕ್ಕೆ ಒಂದುಬಾರಿ ಮಾತ್ರ ಊಟವನ್ನು ಮಾಡಬೇಕು. ಬೆಳಗಿನಿಂದಾ ಉಪವಾಸವಿದ್ದು ಸಂಜೆ ೪.೦೦ ಘಂಟೆಗೆ ಊಟವನ್ನು ಮಾಡಿ ಮತ್ತೆ ಫಲಹಾರಾದಿಗಳನ್ನು ಮಾಡದೇ ಶ್ರೀಧರನ ಪ್ರೀತಿಗಾಗಿ ತುಪ್ಪ, ಕ್ಷೀರ, ಹಣ್ಣು ಮೊದಲಾದವುಗಳನ್ನು ಬ್ರಾಹ್ಮಣನಿಗೆ ದಾನ ಮಾಡಬೇಕು.

೨) ಮಂಗಳ ಗೌರಿವೃತ -

ಮಾಸದಲ್ಲಿ ಬರುವ ೪/೫ ಮಂಗಳವಾರದಲ್ಲಿ ಈ ವೃತವನ್ನ ಮಾಡಬೇಕು. ನವ ವಿವಾಹಿತ ಸ್ತ್ರೀಯರು ವಿವಾಹ ವರ್ಷದಿಂದಾ ೫ ವರ್ಷ ಪರ್ಯಂತ ಈ ವ್ರುತವನ್ನು ಮಾಡಬೇಕು. ಮೂದಲ ವರ್ಷ ತಾಯಿಯ ಮನೆಯಲ್ಲಿಯೂ, ನಂತರದ ವರ್ಷಗಳಲ್ಲಿ ಪತಿಯ ಮನೆಯಲ್ಲಿಯೂ ಆಚರಿಸತಕ್ಕದ್ದು.

) ಬುಧ, ಬ್ರಹಸ್ಪತಿ ವೃತ -
ಶ್ರಾವಣ ಮಾಸದಲ್ಲಿ ಬರುವ ಬುಧ-ಗುರು ವಾರಗಳಲ್ಲಿ ಬುಧ,ಬ್ರಹಸ್ಪತಿಯರನ್ನು ಪೂಜಿಸಿದರೆ ಇಷ್ಟಾರ್ಥಗಳೆಲ್ಲಾ ಸಿದ್ದಿಸುವವು. ಮೊಸರನ್ನವನ್ನು ನಿವೇದನೆ ಮಾಡಿ ಬ್ರಾಹ್ಮಣನಿಗೆ ಭೋಜನ ಮಾಡಿಸಬೇಕು. ಸ್ತ್ರೀಯರು ತೊಟ್ಟಿಲ ಮೇಲ್ಬಾಗದಲ್ಲಿ ಬುಧ-ಗುರು ಚಿತ್ರ ಬರೆದು ಪೂಜಿಸಿದರೆ ಸತ್ಪುತ್ರರು ಜನಿಸುವರು. ಪಾಕ ಶಾಲೆಯಲ್ಲಿ ಪೂಜಿಸಿದರೆ, ಪಾಕ ಸಮೃದ್ಧಿಯಾಗುವದು. ಧನಾಗಾರದಲ್ಲಿ ಪೂಜಿಸಿದರೇ ಧನವು ಅಭಿವೃದ್ದಿ ಯಾಗುವದು. ಇದನ್ನು ಏಳು ವರ್ಷಗಳವರೆಗೆ ಮಾಡಬೆಕು.

೪) ಜಿವಂತಿಕಾ ವೃತ-
ಜಿವಂತಿಕಾ ದೇವಿ ಎಂದರೆ ಸಂತಾನ ಲಕ್ಷ್ಮೀ. ಶ್ರಾವಣ ಶುಕ್ಲ ಶುಕ್ರವಾರದಂದು ಅನೇಕ ಮಕ್ಕಳೂಡಗೂಡಿ ಜೀವಂತಿಕಾದೇವಿಯ ಚಿತ್ರವನ್ನು ಬರೆದು ಷೊಡಷೊಪಚಾರಗಳಿಂದ ಪೊಜಿಸಬೆಕು. ಗೊದಿ ಹಿಟ್ಟಿನಿಂದ ಐದು ಹಣತೆಗಳನ್ನು ಮಾಡಿ ತುಪ್ಪದ ಬತ್ತಿಯಿಂದಾ ಆರತಿ ಮಾಡಬೆಕು. ನಂತರ ಹಣತೆಗಳನ್ನು ತುಪ್ಪದಲ್ಲಿ ಕರೆದು ಸ್ವತ; ಭಕ್ಷಿಸಬೇಕು. ವೃತ ನಿರತರು ಹಸಿರು ಸೀರೆ, ಕುಪ್ಪುಸ, ಬಳೆಗಳನ್ನು ಧರಿಸಬಾರದು. ಹಸಿರು ಬಣ್ಣದ ಕಾಯಿಪಲ್ಯಗಳನ್ನೂ ಬಳಸಬಾರದು. ಅಕ್ಕಿ ತೊಳೆದ ನೀರನ್ನು ಎಂದೂ ದಾಟಬಾರದು. ವೃತಾಚರಣೆಯಿಂದಾ ಗರ್ಭದಲ್ಲಿ ಬದುಕಿ ಜೇವಂತವಾಗಿರುವ ಮಕ್ಕಳೇ ಹುಟ್ಟುವರು.

೫) ಶ್ರಾವಣ ಮಾಸದ ಪ್ರತಿ ಶನಿವಾರ ಶನೇಶ್ವರ, ವಾಯು,ಹಾಗು ನೃಸಿಂಹದೇವರ ಪೂಜೆಯನ್ನು ಷೂಡಶೂಪಚಾರಗಳಿಂದ ಮಾಡಬೇಕು ಯಜಮಾನನು ಅಂದು ಏಳ್ಳೆಣ್ಣೆಯಿಂದಾ ಅಭ್ಯಂಜನವನ್ನು ಮಾಡಬೆಕು. ಹಾಗು ಒಬ್ಬ ವಿಪ್ರರನ್ನು ಆಮಂತ್ರಿಸಿ ಅವರಿಗೂ ಏಳ್ಳೆಣ್ಣೆಯಿಂದಾ ಅಭ್ಯಂಜನ ಮಾಡಿಸಬೆಕು. ವಿಪ್ರನು ಕುಂಟನಾಗಿದ್ದರೆ ಉತ್ತಮ. ಏಕೆಂದರೆ ಶನಿದೇವರು ಕುಂಟನಾದ್ದರಿಂದಾ. ಶನಿದೇವರನ್ನು ಶನ್ನೂದೇವಿ ರಭಿಷ್ಟಯಾ... ಮಂತ್ರದಿಂದಾ, ಹನುಮಂತ ದೇವರನ್ನು ಬುದ್ದಿರ್ಭಲಂ.... ಮಂತ್ರದಿಂದಾ, ಹಾಗು ನೃಸಿಂಹ ದೇವರನ್ನು ಉಗ್ರಂ ವಿರಂ .... ಮಂತ್ರದಿಂದಾ ಆವ್ಹಾನಿಸಿ ಪೂಜಿಸಬೇಕು. ವಿಪ್ರರಿಗೆ ಭೋಜನ ಮಾಡಿಸಿ ಏಳ್ಳೆಣ್ಣೆ, ಕಬ್ಬಿಣಪಾತ್ರೆ, ಏಳ್ಳು, ಫಲ, ತಾಂಬೂಲಗಳೂಂದಿಗೆ ದಕ್ಷಿಣಾದಿಗಳನ್ನು ಕೂಟ್ಟು ಶನಿಯು ಪ್ರೀತನಾಗಲಿ ಎಂದು ಕೃಷ್ಣಾರ್ಪಣ ಬಿಡಬೇಕು. ಈ ವೃತದಿಂದಾ ಲಕ್ಷ್ಮೀ ಸ್ತಿರವಾಗಿ ನಿಲ್ಲುವಳು, ಪಂಚಮ, ಅಷ್ಟಮ, ಎಳುವರೆಶನಿಯ ಕಾಟಗಳು ಇರುವದಿಲ್ಲಾ.

) ರೋಟಿಕಾವೃತ- ರೋಟಿಕಾವೃತವು ಶ್ರಾವಣ ಮಾಸದ ಶುಕ್ಲ ಪ್ರತಿಪದಾ ಸೋಮವಾರ ಬಂದರೆ ಅಂದಿನಿಂದಾ ೫ ವಾರಗಳಕಾಲ ಆಚರಿಸಬೇಕು. ಈ ದಿನಗಳಲ್ಲಿ ರುದ್ರಾಂತರ್ಮಿಯಾದ ಸಂಕರ್ಷಣನನ್ನು "ತ್ರ್ಯಯಂಬಕಂ ಯಜಾಮಹೇ.... ಮಂತ್ರದಿಂದಾ ಆಹ್ವಾನಿಸಿ ಬಿಲ್ವ ಹಾಗು ನಾನಾ ತರದ ಪುಷ್ಪಗಳಿಂದಾ ಪೂಜಿಸಿ (೫) ಐದು ರೂಟ್ಟಿಗಳನ್ನು ನೇವೈದ್ಯವೆಂದು ಅರ್ಪಿಸಬೆಕು. ಅದರಲ್ಲಿ ೨ ನ್ನು ವಿಪ್ರರಿಗೆ, ೨ ನ್ನು ಪೂಜಕನಿಗೂ, ಒಂದನ್ನು ಭಗವಂತನಿಗೆ ಅರ್ಪಿಸಬೆಕು. ಭಗವಂತನಿಗೆ ಅರ್ಪಿಸಿದ ರೂಟ್ಟಿಯನ್ನು ಗೋವಿಗೆ ಕೂಡಬೇಕು. ಈ ವೃತಚರಣೆಯಿಂದಾ ಸಪ್ತದ್ವೀಪಸಹಿತ ಭೂಮಿಯನ್ನು ದಾನ ಮಾಡಿದರೆ ಬರುವ ಫಲ ದೂರಕುವದು. ಈರಿತಿಯಾಗಿ ೫ ವರ್ಷಗಳ ಪರ್ಯಂತರ ಮಾಡಿ ನಂತರ ಉದ್ಯಾಪನೆಯನ್ನು ಮಾಡಿ ವೃತ ಸಮಾಪ್ತಿ ಮಾಡಬೆಕು. 


ಸಶೇಷ...

ಸಂಗ್ರಹ -
ಶ್ರೀ ಗುರುರಾಜಾಚಾರ್ ಪುಣ್ಯವಂತ,
ಹುಬ್ಬಳ್ಳಿ