Tuesday, June 25, 2013

ಉಡುಪಿ ಯಾತ್ರೆ-೩

ಉಡುಪಿ ಯಾತ್ರೆ-೩

ನೀವುಆಜ್ನೆ ಕೂಟ್ಟರೆ ಇಲ್ಲೇ ಎಲ್ಲರಿಗೂ ಮುದ್ರಾಕೂಡುತ್ತೇವೆ ಇಲ್ಲೇ ಹಾಕಲು ಆತಂಕವಾದಲ್ಲಿ ಇಲ್ಲೇ ಸಮೀಪದ ಹಳ್ಳಿಗೆ ಹೋಗಿ ಎಲ್ಲರಿಗೂ ಮುದ್ರಾ ಕೂಟ್ಟು ಪೂಜಾ ತೀರ್ಥ ಪ್ರಸಾದ ಮುಗಿಸಿಕೂಂಡು ಸಾಯಂಕಾಲಕ್ಕೆ ಪರತ ಬರುತ್ತೇವೆ ಅಂತಾ ವಿಚಾರ ಮಾಡಿಕೂಂಡು ಬರಲು ಸನ್ನಿಧಾನಕ್ಕೆ ಕಳಿಸಿರುತ್ತಾರೆ. ತಾವು ಆಜ್ನಾಮಾಡಿದ ಪ್ರಕಾರ ಅಲ್ಲಿ ಅರಿಕೆಮಾಡಿಕೂಳ್ಳುತ್ತೇವೆ. ಅದರಂತೆ ಮುಂದಿನ ಕಾರ್ಯ ಕೈಕೂಳ್ಳಲಾಗುವದು. ಎಂದು ಸದರವಕೀಲರು ವಗೈರೆ ಜನರು ಬಿನ್ನಹ ಮಾಡಿಕೂಳ್ಳಲು ಇವರ ಪ್ರಾರ್ಥನೆಗೆ ಕೃಪಾಶಿರ್ವಾದದಿಂದಾ ನಾನು ಪರ್ಯಾಯ ಪೀಠದಲ್ಲಿ ಇರುವವರೆಗೂ ನಮ್ಮ ಕಣ್ವ ಶಾಖೆಯ ಪೀಠದ ಶ್ರೀಗಳವರಿಗೆ ಪೂರ್ಣ ಅಧಿಕಾರವಿದೆ. ಇನ್ನುಮೇಲೆ ಯಾವುದೇ ಕಾರ್ಯಮಾಡಲು ನಮ್ಮ ಆಜ್ನೆಯ ಅವಶ್ಯವೇ ಇಲ್ಲಾ ಅಂತಾ ತಮ್ಮಕಡೆಗೆ ಬಂದಶಿಷ್ಯರ ಕಡಿಂದಾ ಈಪ್ರಕಾರ ತಮ್ಮ ಸೂಚನೆಯನ್ನು ಮಾಡಿದರು. ಇದೇನು ಸಣ್ಣವಿಷಯವಲ್ಲ. ಆದರೂ ಪರಮಾತ್ಮನ ಸಂಕಲ್ಪಕ್ಕೆ ಎಂತಹ ಮಹತ್ವದ ವಿಷಯವಾದರೂ ಸರಳವಾಗಿ ಹೂಗುತ್ತದೆ. ಶ್ರೀಗಳ ನಿರೂಪ ಬಂದಮೇಲೆ ಎಲ್ಲ ಶಿಷ್ಯರಿಗೂ ಇಲ್ಲಿ ಮುದ್ರಾ ಹಾಕುವದಾಗಿ ತಿಳಿಸಲು ಎಲ್ಲಕಡೆಗೂ ಮುದ್ರಾದ ಗೂಂದಲವೇ ಗೂಂದಲ. ಅಲ್ಲೇ ಕನಕನ ಖಿಂಡಿಯ ಹತ್ತಿರ ಎಡಭಾಗದಲ್ಲಿ ವಿಠಲಕೃಷ್ಣ ಮಂಟಪದ ಮುಂದೆ ಮುದ್ರಾ ಪ್ರಾರಂಬವಾಗಿ ಅಜಮಾಸ ೭-೮ನೂರು ಮಂದಿಗೆ ಮುದ್ರಾ ಕೂಡಲಾಯಿತು. ಇನ್ನು ಶಿರೂರ ಮಠದ ಶ್ರೀಗಳ ದರ್ಶನ ಕಾರ್ಯ ಒಂದು ಉಳಿಯಿತು. ಇದನ್ನೂಂದು ಕಾರ್ಯ ಮುಗಿಸಬೇಕೆಂಬ ವಿಚಾರ ನಡೆಯಿತು. ಇದರ ಬಗ್ಗೆ ವಿಚಾರ ಮಾಡಿಕೂಂಡು ಬರುವದಕ್ಕೂಸ್ಕರ ವೇ|| ಗೋಪಾಲಾಚಾರ್ಯ ಕನಕಗಿರಿ ಮತ್ತು ಪಟ್ವಾಲ ಇವರನ್ನು ಕಣ್ವ ಮಠದ ಶ್ರೀಗಳು ತಮ್ಮ ದರ್ಶನಕ್ಕೆ ಬರುತ್ತಾರೆ ಎಂದು ತಿಳಿಸಲು ಶಿರೂರ ಮಠದ ಶ್ರೀಗಳವರಕಡೆಗೆ ಕಳಿಸಲಾಯಿತು. ಸದರಿಯವರು ಶಿರೂರ ಮಠಕ್ಕೆ ಹೋಗಿ ಶ್ರೀಗಳವರಿಗೆ ಭೇಟಿಯಾಗಿ ಶ್ರೀಕಣ್ವ ಮಠದ ಶ್ರೀಗಳವರು ತಮ್ಮ ದರ್ಶನಕ್ಕೆ ಬರುತ್ತೇವೆಂದು ತಿಳಿಸಲು ನಮ್ಮನ್ನು ಕಳಿಸಿದ್ದಾರೆ. ಆ ಪ್ರಕಾರ ನಾವು ಸನ್ನಿಧಾನದಲ್ಲಿ ಅರಿಕೆ ಮಾಡಿಕೂಂಡಿದ್ದೇವೆ. ಮಹಾದಾಜ್ನೆ ಪ್ರಕಾರ ನಡೆದುಕೂಳ್ಳುತ್ತೇವೆ. ಅಂತಾ ತಿಳೀಸಲಾಗಿ ಅದರಗೋಸ್ಕರ, ಶ್ರೀಗಳವರು ಈಗ ಕಣ್ವಮಠದ ಶ್ರೀಗಳವರು ಅಥಿತಿ ಆಗಿ ಬಂದಿದ್ದಾರೆ. ಅವರನ್ನು ಸ್ವಾಗತ ಪೂರ್ವಕವಾಗಿ ಬರಮಾಡಿಕೂಳ್ಳೂವವರಿದ್ದೇವೆ.
ಸಂಜೆ ೦೪-೦೦ಘಂಟೆಗೆ ನಮ್ಮ ಪರಿವಾರದವರನ್ನು ಶ್ರೀಗಾಲನ್ನು ಆಮಂತ್ರಿಸಿಕೂಂಡು ಬರಲು ಕಳಿಸುತ್ತೆವೆ. ಆಗ್ಗೆ ತಾವೆಲ್ಲರೂ ಕೂಡಿಕೂಂಡು ಬರುವದಾಗಿ ತಿಳಿಸಿದರು. ಅದೇ ಪ್ರಕಾರ ಮುಂದಿನ ಸಿದ್ದತೆ ಮಾಡಲಾಯಿತು. ಇಷ್ಟೆಲ್ಲಾಕಾರ್ಯ ಮುಗಿಯುವದರೂಳಗಾಗಿ ಮದ್ಯಾನ್ಹವಾದದ್ದರಿಂದಾ ಸ್ನಾನ,ಪೂಜಾದಿ ಎಲ್ಲ ಕಾರ್ಯಗಳನ್ನು ಮುಗಿಸಿ ಶ್ರೀಪರ್ಯಾಯ ಪೀಠಾಲಂಕ್ರತ ಶ್ರೀಗಳಿಂದಾ ಕರೆ ಬರಲು ಶ್ರೀಕೃಷ್ಣದೇವರ ಸನ್ನಿಧಾನಕ್ಕೆ ಹೋಗಿ ನೇವೈದ್ಯ ಮಂಗಳಾರತಿ ಮುಗಿಸಿಕೂಂಡು ಎಲ್ಲಶಿಷ್ಯರಿಂದಾ ಚೌಕಿಗೆ ಹೋಗಿ ಎಲ್ಲ ಶ್ರೀಗಳ ಸಹಪಂಕ್ತಿಯಲ್ಲಿ ಭೋಜನ ಮುಗಿಸಿಕೂಂಡು ಬಂದು ನಮ್ಮ ವಾಸಸ್ಥಾನದಲ್ಲಿ ವಿಶ್ರಾಂತಿ ತೆಗೆದುಕೂಳ್ಳಲಾಯಿತು. ಮೂದಲೇ ತಿಳೀಸಿದ ಪ್ರಕಾರ ೦೪-೦೦ಘಂಟೆಗೆ ಶಿರೂರ ಮಠದ ಶ್ರೀಗಳವರು ತಮ್ಮ ದಿವಾನ ಮತ್ತು ಪರಿವಾರದೂಂದಿಗೆ ನಮ್ಮನ್ನುಕರೆಯಬಂದರು. ಸದರಿಯವರ ಸಂಗಡ ನಮ್ಮ ಶಿಷ್ಯ ಸಮೋಹದೂಡನೆ ಶಿರೂರ ಮಠಕ್ಕೆ ಹೋಗಲಾಯಿತು. ಅಲ್ಲಿ ಸ್ವಾಗತ ಸಮಾರಂಭ ಮುಗಿದಮೇಲೆ ಶಿರೂರ ಶ್ರೀಗಳವರ ಸನ್ನಿಹಿತವಾಗಿ ಸಿದ್ದಮಾಡಲ್ಪಟ್ಟ ಪೀಠಾರೋಹಣ ಮಾಡಲಾಯಿತು. ಆಮೇಲೆ ಶಿರೂರ ಶ್ರೀಗಳು ತಮ್ಮಶಿಷ್ಯರದ್ವಾರಾ ನಮಗೆ ಫಲಪುಷ್ಪತಾ ಮತ್ತು ಪೀತಾಂಬರ, ರೂ೫೧-೦೦ ಗಳು ಕಾಣಿಕೆಯಾಗಿ ಕೂಟ್ಟರು. ಅವುಗಳನ್ನು ಸ್ವೀಕರಿಸಲಾಯಿತು. ನಮ್ಮ ಸಿಷ್ಯ ವೇ|| ಶಿನಪ್ಪಯ್ಯ ದೇವರು ದ್ವಾರಾ ಫಲ ಪುಷ್ಪ ಅಕ್ಷತಾ ರೂ೧೦೧-೦೦ ಗಳನ್ನು ಕಾಣಿಕೆಯಾಗಿ ಕೂಡಲಾಯಿತು. ಮತ್ತು ಸ್ವಲ್ಪ ಮಟ್ಟಿಗೆ ಮಠದ ವಿಷಯವನ್ನು ಪರಿಚಯ ಮಾಡಿಕೂಡಲಾಯಿತು. ನಿಮ್ಮ ಪೀಠಸ್ಥರಾದ ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರಿಂದಾ ನಮ್ಮ ಮೂಲ ಪಿಠಸ್ಥರಾದ ಶ್ರೀ ಮನ್ ಮಾಧವತೀರ್ಥರಿಗೆ ಆಶ್ರಮ ಕೂಟ್ಟು ಮಠ ಸ್ಥಾಪನಮಾಡಿಸಿರುತ್ತಾರೆ. ಹಿಂದೆ ಶ್ರೀ ಮಾಧವತೀರ್ಥರು ಬರೆದುಕೂಟ್ಟ ಶರ್ತುಗಳು ಏನು ಇರುವವೂ ಏನು ಏಂದು ಅವುಗಳನ್ನು ನಮಗೆ ಸರಿಪಡಿಸಲು ಸಾದ್ಯವೋ, ಅಸಾಧ್ಯವೋ ಏಂಬಭಯದಿಂದಾ ಇಲ್ಲಿಯವರೆಗೂ ನಮ್ಮ ಪೀಠದ ಯಾವ ಶ್ರೀಗಳವರು ಇಲ್ಲಿಗೆ ಬಂದಿರುವದಿಲ್ಲಾ. ಈಗಮಾತ್ರ ನಾವು ಶ್ರೀವಿಠಲಕೃಷ್ಣನ ಮೂಲ ರಜತಪೀಠವನ್ನು, ಮೂಲಸ್ಥಾನದ್ಲ್ಲಿ ಇರುವ ಶ್ರೀ ಕೃಷ್ಣನ ದರ್ಶನ ಮತ್ತು ನಮ್ಮ ಪೀಠವನ್ನುಸ್ತಾಪಿಸಲು ಆಧಾರಸ್ಥಂಬವಾದ ನಮಗೆ ಗುರುಪೀಠವಾದ ನಿಮ್ಮಪೀಠವನ್ನು ಅವಲೋಕನ ಮಾಡಲು ಶ್ರೀಕೃಷ್ಣನ ಪ್ರೇರಣೆಯಿಂದಾ ಅತೀ ಆತುರರಾದೆವು. ಇಲ್ಲಿಗೆ ಈಗ ೨೦೦ವರ್ಷಗಳ ಹಿಂದೆ ರಜತಪೀಠ ಬಿಟ್ಟು ಕಣ್ವಪೀಠಕ್ಕೆ ಬಂದ ಶ್ರೀ ಹರಿಗೂ ತನ್ನ ಪೀಠಕ್ಕೆ ಹೋಗಬೇಕೆಂಬ ಆತುರ.
ಆದರೆ ಭಕ್ತಾಭಿಮಾನಿಯಾದ ಶ್ರೀಹರಿಯು ಭಕ್ತರಬಿಟ್ಟು ಹೋಗಲು ಸಾಧ್ಯವೇಇಲ್ಲವೆಂಬ ಚರ್ಚಯಗೋಸ್ಕರವಾಗಿ ಸ್ವಲ್ಪವಿಷಯಗಳನ್ನು ಬೆಳೆಸಬಯಸುವೆವು. ಈಗ ನಮ್ಮದೇ ಒಂದು ವಿಷಯ ನಾವು ವಿಜಾಪೂರ ಜಿಲ್ಲೆಯ ಬಾಗೆವಾಡಿತಾಲ್ಲೂಕದ ಬಳೂತಿ ಎಂಬ ಗ್ರಾಮದ ಜೋಯ್ಸರ ಮನೆಯಲ್ಲಿ ಹಿಟ್ಟಿದವನು ಕಣ್ವಪೀಠದ ಅತೀ ಅಪರಿಚಿತನು. ಸುಖ ದುಖ:ದ ತೋಳಲಾಟದಲ್ಲಿ ಅಜ್ನಾಂಧಕಾರದಲ್ಲಿ ಬಿದ್ದು ಯಾವಮಾರ್ಗ ತೋಚದಂಥಾ ಅಧಮನು. ಪ್ರಚಾರಗಳಿಗೆ ಉಪಯುಕ್ತವಾದಂತಾ ಒಂದು ಕಿಂಚಿತ್ ಶಕ್ತಿಯು ನನ್ನಲ್ಲಿರುವದಿಲ್ಲಾ. ಇಂತಹ ಸ್ತಿತಿಯಲ್ಲಿ ಕರುಣಾಸಾಗರನಾದ ಶ್ರೀ ಹರಿಯು ಕಣ್ವ ಮಠದ ಶಿಷ್ಯಂತರ್ಗತನಾಗಿ ನನ್ನನ್ನು ಹುಡುಕುಬಂದ ತನ್ನ ಸೇವೆಗೋಸ್ಕರ ಎಳೆತಂದ ಶ್ರೀಹರಿಯುನಮ್ಮನ್ನು ಬಿಟ್ಟು ಉಡುಪಿಗೆ ಹೋಗಲು ಸಾಧ್ಯವೇ. ಎಂದಿಗೂ ಆಗಲಾರದು, ಶ್ರೀಹರಿಯು ಹೇಗಾದರೂ ಭಕ್ತರಬಿಟ್ಟು ಅಗಲಲಾರಾ. ನಾವು ಅಪರಿಚಿತರಾದ್ದರಿಂದಾ ಯಾವ ಕಾರ್ಯವನ್ನು ಯಾವ ಶಿಷ್ಯರಿಗೆ ವಹಿಸಬೆಕೆಂಬುದರ ವಿಷಯದಲ್ಲಿ ನಮ್ಮ ಬುದ್ದಿಯು ಕುಂಠಿತವಾದದ್ದು ಸಹಜವದೆ. ಅದಕ್ಕೂಸ್ಕರವಾಗಿ ಶ್ರೀಹರಿಯು ಎಲ್ಲಭಾರವನ್ನು ತಾನೇ ಸಹಿಸಬೇಕಾಯಿತು. ಏಲ್ಲಶಿಷ್ಯರಿಗೆ ಯಾವಯಾವ ಪ್ರೇರಣೆ ಮಾಡಬೇಕು ಮಾಡಿ ಆ ಪ್ರೇರಣೆಯ ಪ್ರಕಾರ ಅವರು ಮಾಡುವ ಕಾರ್ಯಗಳಿಗೆ ಅನಕೂಲ ಮಾಡಿಕೂಟ್ಟು ಎಲ್ಲರನ್ನು ತನ್ನ ಪೀಠಕ್ಕೆ ಕರೆದುಕೂಂಡು ಬಂದನು. ಇರಲಿ ನಾವು ಸ್ವಲ್ಪದರಲ್ಲಿಯೇ ನಮ್ಮ ಮಠದ ವಿಷಯವನ್ನು ತಿಳಿಸಲಾಯಿತು. ಎಲ್ಲ ವಿಷಯಗಳಳನ್ನು ತಿಳಿದುಕೂಂಡ ಮೇಲೆ ಒಳ್ಳೆ ಹರ್ಷೂದ್ಗಾರಗಳಿಂದಾ ಶಿರೂರ ಮಠದ ಶ್ರೀಗಳು ನುಡಿದ ಎರಡು ಮಾತುಗಳು ಹಿಂದಿನ ವಿಷಯ ಹಿಂದೆ ಆಯಿತು ಮುಂದೆ ಆ ವಿಷಯಗಳನ್ನು ಎತ್ತುವಕಾರಣವಿಲ್ಲಾ. ನಮ್ಮಪೀಠದಿಂದಾ ಕಣ್ವಪೀಠ ಸ್ತಾಪಿತವಾಗಿದೆ ಎಂಬಗೌರವವೇ ಸಾಕು. ಹೆಚ್ಚಿನದೇನೂ ಬೇಡಾ. ಇನ್ನುಮೇಲೆ ಎಲ್ಲಪೀಠಗಳೂ ಒಕ್ಕಟ್ಟಾಗಿನಡೆದರೆ ಎಲ್ಲಾ ಕಾರ್ಯಗಳು ಅನಕೂಲವಾಗಿ ಮಠಗಳ ಗೌರವವು ಉಳಿಯುತ್ತವೆ. ಸಮಾಜ ಸುಧಾರಣೆಯಗೂಸ್ಕರ ಹೆಚ್ಚು ಪ್ರಯತ್ನ ಮಾಡಲುಸಾದ್ಯ ವಾಗುತ್ತದೆ. ಇನ್ನು ಮೇಲೆ ನೀವುಯಾವ ಸಂಕೂಚ ತಕ್ಕೂಳ್ಳುವ ಕಾರಣವಿಲ್ಲಾ. ನೀವು ಇನ್ನು ಮೇಲೆ ಬೇಕಾದಾಗ್ಗೆ ಬರಬಹುದು. ನೀವು ಯಾವಾಗ್ಗೆ ಬಂದರೂ ನಿಮ್ಮ ಪೀಠಕ್ಕೆ ಗೌರವವಿದೆ. ಮತ್ತು ಯಾವ ಅನುಮಾನವಿಲ್ಲದೆ ನಿಮ್ಮ ಕೂಡಾ ಸಹಕರಿಸಿ ನೀವು ಬಂದಕಾರ್ಯಗಳನ್ನು ಮುಗಿಸಿ ನಿಮ್ಮನ್ನು ಪರತ ಕಳಿಸುವದು ನಮ್ಮದಿರುತ್ತದೆ. ಅಂತಾ ಹೇಳಿಬಿಟ್ಟರು.
ಆಮೇಲೆ ಫೋಟೋ ವಗೈರೆ ತೆಗೆಯುವ ಕಾರ್ಯಕ್ರಮಗಳು ಮುಗಿದ ನಂತರ ಪರತ ನಮ್ಮ ಸ್ತಾನಕ್ಕೆ ಬಂದೆವು. ಆಮೆಲೆ ಕೃಷ್ಣಾಪುರ ಮಠಕ್ಕೆ ಹೂಗಿ ಮೂದಲಿನಂತೆ ಕಾರ್ಯಕ್ರಮ ಮುಗಿಸಿಕೂಂಡು ಬಂದೆವು. ಆಮೇಲೆ ಮಠದ ನಿಮಿತ್ಯವಾಗಿ ಒಂದು ಸೇವಾ ಮಾಡಿಸಬೇಕು ಅಂತಾ ಎಲ್ಲ ಶಿಷ್ಯರು ಕೂಡಿಕೂಂಡು ವಿಚಾರ ಪ್ರಾರಂಭಮಾಡಿದರು. ಎಲ್ಲರೂ ತಮ್ಮ ಮನಸ್ಸಿನ ವಿಚಾರಗಳನ್ನು ತಿಳಿಸಲು ಪ್ರಾರಂಭ ಮಾಡಿದರು. ಎಲ್ಲರವಿಚಾರಗಳ ಸಮ್ಮಿಲನ ಮಾಡಿ ರಜತ ರಥೋತ್ಸವ ಮಾಡಿಸಬೇಕೆಂದು ನಿಶ್ಚಯಿಸಲಾಯಿತು. ಎಲ್ಲಶಿಷ್ಯರು ತಮ್ಮ ಯೂಗ್ಯತೆಯ ಮೇರೆಗೆ ವರ್ಗಣಿಕೂಡಿಸಿಕೂಂಡು ರೂ ೫೦೧/ ಕೂಟ್ಟು ಅವತ್ತಿನ ದಿವಸ ರಥೂತ್ಸವ ಮಾಡಿಸಲಾಯಿತು. ನಂತರ ಸಾಯಂಕಾಲದ ಸ್ನಾನ ಮಂಗಳಾರತಿ ಎಲ್ಲ ಕಾರ್ಯಕ್ರಮ ಮುಗಿಸಿ ಆಮಂತ್ರಿಸಿದ ಪ್ರಕಾರ ಸಭಾಸ್ಥಾನಕ್ಕೆ ಬರಲಾಯಿತು. ಅಲ್ಲಿ ಪ್ರೇಕ್ಷಕರು, ಭಾಷಣಕಾರರು, ಗಾಯಕರು, ಮಾನಪತ್ರಾರ್ಪಣ ಮಾಡುಅವವರಿಂದಾ ಅಸಂಖ್ಯಾತ ಜನ ಗುಂಪುಗೂಡಿದ್ದಾಗಿತ್ತು. ಸಭಾವೇದಿಕೆಯಮೇಲೆ ನಾಲ್ಕು ಜನ ಶ್ರೀಗಳವರು ಉಪಸ್ಥಿತರಾಗಿದ್ದರು. ೧) ವಿದ್ಯಮಾನ್ಯ ತೀರ್ಥ ಭಂಡಾರಕೇರ ಶ್ರೀಗಳು, ೨) ವಿಶ್ವೇಶತೀರ್ಥ ಪೇಜಾವರಶ್ರೀಗಳು, ೩) ಶ್ರೀ ವಿದ್ಯಾತಪೋನಿಧಿ ತೀರ್ಥ ಕಣ್ವ ಮಥದ ಶ್ರೀಗಳು, ೪) ಚಿತ್ತಾಪೂರದ ಶ್ರೀಗಳವರು. ಈಪ್ರಕಾರ ಶ್ರೀಗಳವರು ಪೀಠಾರೋಹಣ ಮಾಡಿರಲು ಎಲ್ಲಕಾರ್ಯಗಳು ಇವರ ಅಧಿಕಾರ ಕ್ಷೇತ್ರದಲ್ಲಿಯೇ ನಡೆಯುವವು ಎಂಬ ಭಾವನೆಯಾಗಿ ಎಲ್ಲರ ಭಿತ್ತಿವೃತ್ತಿಯು ಇವರಲ್ಲಿಯೇ ತಲ್ಲೀನವಾಗಿದ್ದವು. ಮೂದಲಿಗೆ ಮಾನಪತ್ರ ವಂದನಾರ್ಪಣೆ, ಗಾಯನ, ಭಾಷಣ, ಈ ಪ್ರಕಾರ ಕರ್ಯಕ್ರಮಗಳು ಮೂದಲೇ ಠರಾಯಿಸಿ ಒಂದೂಂದು ಕಾರ್ಯದಲ್ಲಿ ಒಬ್ಬವ್ಯಕ್ತಿಗೆ ಇಂತಿಷ್ಟು ವೇಳೆ ಎಂಬ ನಿರ್ಭಂದ ಮಾಡಿ ಅದರಂತೆ ಒಂದು ಬೋರ್ಡಮೇಲೆ ಹಚ್ಚಲಾಯಿತು. ಆ ಮೇಲೆ ಕಾರ್ಯಕ್ರಮಗಳು ಪ್ರಾರಂಭ ಮಾಡಲ್ಪಟ್ಟವು. ಅಲ್ಲಿಯ ಶಾಂತತೆ, ಒತ್ಸಾಹ ವಿದ್ವನ್ಮಣಿಗಳ ಸಮೂಹ ಇದರಗೂಸ್ಕರವಾಗಿ ಎಲ್ಲರೂ ತಮ್ಮಕ್ರಮದಲ್ಲಿ ವೇಳೆಯ ಆಕ್ರಮಣ ಮಾಡಲಾರಂಭಿಸಿದರು. ಹಿಗಾಗಿ ವೇಳೆಯು ಸಾಲದಾಯಿತು. 
ವಂದಾನರ್ಪಣೆ, ಗಾಯನ ಮುಗಿದಮೇಲೆ ಭಾಷಣದ ವೇಳೆತೀರಾ ಸ್ವಲ್ಪ ಒಳಿಯಿತು. ಭಾಷಣಕಾರರು ತಮ್ಮ ಭಾಷಣಗಳ ಮೂಲಕ ಎಲ್ಲ ಜನರ ಮೇಲೆ ಪರಿಣಾಮವಾಗಹತ್ತಿದ್ದರಿಂದಾ ಭಾಷಣಕಾರರಿಗೆ ನಿಮ್ಮ ವೇಳೆ ಮುಗಿಯಿತು ಅಂತಾ ಸೂಚನೆ ಕೂಡಲಾಯಿತು. ಆಮೇಲೆ ಪೇಜಾವರ ಶ್ರೀಗಳವರು ಪ್ರವಚನ ಪ್ರಾರಂಭವಾಯಿತು. ಈಗನಡೆದ ಪರ್ಯಾಯದ ಉತ್ಸವಕ್ಕೆ ಸದ್ಭಕ್ತರು, ಜ್ನಾನಿಗಳು, ವಿದ್ವಾನಜನರು, ತಮ್ಮ ತನು ಮನ ಧನುಗಳೀಂದಲೂ ಸೇವೆಸಲ್ಲಿಸತಕ್ಕ ಕಾರ್ಯಕರ್ತರು ಇಲ್ಲಿಗೆ ಆಗಮಿಸಿ ಭಗವಹಿಸಲಾಗಿತ್ತು. ಎಲ್ಲ ಕಾರ್ಯಗಳು ಒಳ್ಳೆವಿಜ್ರಂಭಣೆಯಿಂದಾ ಜರುಗಿದವು. ಅದರಲ್ಲಿ ಕಣ್ವಮಠದ ಶ್ರೀಗಳ ಆಗಮನದಿಂದಾ ವಿಶೇಷವಾದ ಕಳೆಬಂದಿರುತ್ತದೆ. ಈಗ ಕಣ್ವಪೀಠದಲ್ಲಿರುವ ಶ್ರೀವಿದ್ಯಾತಪೂನಿಧಿ ತೀರ್ಥ ಶ್ರೀಪಾದಂಗಳವರು ತಪಸ್ವಿಗಳು, ಒಳ್ಳೆವರ್ಚಸ್ವಿಗಳು, ಸತ್ವಸ್ತರು, ಸಮಾಜಊದ್ಧರಕ್ಕೋಸ್ಕರ ಒಳ್ಳೆ ಕಳೆಕಳೆಯುಳ್ಳವರು. ಮತ್ತು ಭಗವತ್ಕೃಪೆಗೆ ಪಾತ್ರರಾಧವರೆಂಬ ಬಗ್ಗೆ ನಮಗೆ ಮನವರಕೆಯಾಗಿದೆ. ಆಶ್ರಮ ತೆಗೆದುಕೂಂಡ ೬ ತಿಂಗಳಲ್ಲಿ ಹಿಂದೆ ಪಿಠಾದ್ಯಂತ ಇಲ್ಲಿಗೆ ಬರಲು ಪ್ರಯತ್ನಮಾಡಿ ಯಾವಶ್ರೀಗಳಿಗೂ ಸಾದ್ಯವಾಗದ ರಜತಪೀಠಕ್ಕೆ ಸರಳವಾಗಿ ಬಂದುಬಿಟ್ಟರು. ಇರಲಿ ಈಕಣ್ವ ಮಠವು ನಮ್ಮ ಉಡುಪಿಯ ಶಿರೂರ ಮಠದ ಶ್ರೀ ಲಕ್ಷ್ಮೀಮನೂಹರತೀರ್ಥರಿಂದಾ ಆಶ್ರಮ ಪಡೆದ ಶ್ರೀಮನ್ಮಾಧವತೀರ್ಥ ಶ್ರೀಗಳವರಿಂದಾ ಸ್ಥಾಪಿಸಲ್ಪತ್ತಿರುವದು. ಅಂದಮೇಲೆ ನಮ್ಮದೇ ಆಯಿತು. ಅಂತುಒತ್ತಿನಲ್ಲಿ ಹೇಳುವದೆಂದರೆ ಉಡುಪಿಯ ಎಂಟುಮಠದ ಪೈಕಿ ಕಣ್ವಮಠ ಒಂಬತ್ತನೇಯ ಮಠವೆಂದು ಎಲ್ಲರೂ ಸಹಕರಿಸಿ ಗೌರವಯುಕ್ತವಾಗಿ ನಡೆದುಕೂಳ್ಳಬೇಕೆಂದು ನಾವು ನಿ:ಸ್ಸಂಡೆಹವಾಗಿ ಹೇಳುತ್ತೇವೆ. ಮತ್ತು ಎಲ್ಲ ಜನರು ಈಕಾರ್ಯದಲ್ಲಿ ಭಾಗವಹಿಸಿದ್ದರಿಂದಾ ನಿಮ್ಮೆಲ್ಲರಿಗೂ ಆಯು, ಆರೂಗ್ಯ ಐಶ್ವರ್ಯ, ಅಭಿರ್ವದ್ದಿಯಾಗಲೆಂದು ಕೋರಿ ವೇಳೆ ಸಂಕುಚಿತ ಮೂಲಕವಾಗಿ ನಮ್ಮ ಪ್ರವಚನ ಮುಗಿಸುತ್ತೇವೆ.
ನಮಗೆ ನಿಕಟ ಸಂಬಂಧ ಶಿಷ್ಯರಾದ ದೇವರು ವಕೀಲರೇ ಮೂದಲಾದ ಎಲ್ಲರೂ ಈಗ ಇಲ್ಲಿ ನಮ್ಮ ಶ್ರೀಗಳು ತಾವು ಸ್ವಲ್ಪ ಮಟ್ಟಿಗೆ ಭಾಷಣ ಮಾಡಿದರೆ ನೆಟ್ಟಗಾಗುತ್ತಿತ್ತು. ಅಂತಾ ಕೇಳಿಕೂಳ್ಳಲು ಧೈರ್ಯವಾಗದೇ ಯಲ್ಲರಿಗೂ ಪ್ರವಚನ ಹೇಳಲು ಧೈರ್ಯ ಬರಲಿಲ್ಲಾಯಂದು ತಿಳಿದುಕೂಂಡು ಉಪಾಯವಿಲ್ಲಾ ಅಂತಾ ಉದಸೀನರಾಗಿಬಿಟ್ಟರು. ಆದರೆ ಶ್ರೀವಿಠಲಕೃಷ್ಣನ ಪ್ರೇರಣೆಯಿಂದಾ ನಾವುಇಲ್ಲಿ ಪ್ರವಚನರೂಪವಾಗಿ ಎರಡು ಮಾತಾಡುವ ಕುತುಹಲ. ಆದರೆ ಬೋರ್ಡಿನಲ್ಲಿ ನಮಗೆ ಮಾತನಾಡಲು ವೇಳೆಇಲ್ಲಾ ಇದರಿಂದಾ ನಾವು ಪೇಜಾವರ ಶ್ರೀಗಳವರಿಗೆ ನಮಗೆ ಪ್ರವಚನೆಗೂಸ್ಕರವಾಗಿ ಸ್ವಲ್ಪ ವೇಳೆ ತೆರು ಮಾಡಿಕೂಡಲು ವಿಚಾರಿಸಿದೆವು. ಆಗೆ ಶ್ರೀಗಳವರು ನೀವು ಬೇಕಾದಷ್ಟು ವೇಳೆ ತೆಗೆದುಕೂಳ್ಳಬಹುದು ಅಂತಾ ಹೇಳಿ ಇನ್ನುಮುಂದಿನ ವೇಳೆಯನ್ನು ಶ್ರೀಕಣ್ವಮಠದ ಶ್ರೀಗಳ ಪ್ರವಚನದಗೂಸ್ಕರ ಕೂಟ್ಟಿದೆ. ಅವರದು ಮುಗಿದಮೇಲೆ ಮುಂದಿನವರು ಪ್ರಾರಂಭ ಮಾಡಬೇಕು ಅಂತಾ ಎಲ್ಲರಿಗೂ ಸೂಚನೆ ಮಾಡಿದರು. ಆಮೇಲೆ ನಮ್ಮ ಪ್ರವಚನ ಪೂರ್ವದಲ್ಲಿ ಮೂದಲು ಶುಕ್ಲಾಂಭರಧರಂ ಇದರಿಂದಾ ವಿಠಲಕೃಷ್ಣನಿಗೆ ಮತ್ತು ವಂದೇಹಂ ಮಂಗಲಾತ್ಮಾನಾಂ ಇದರಿಂದಾ ಯೂಗೀಶ್ವರ ಯಾಜ್ನ್ಯವಲ್ಕ್ಯರಿಗೂ ಮತ್ತು ಮಾಧವಾರ್ಯರಿಂದಾ ಎಲ್ಲ ಗುರುಗಳಿಗೂ ವಂದನಾರ್ಪಣೆ ಮಾಡಿ ನಮ್ಮ ಪ್ರವಚನ ಪ್ರಾರಂಭ ಮಾಡಿದೆವು. ಈಗಿನ ವೇಳೆಯಲ್ಲಿ ನಮಗೆ ಇಲ್ಲಿಗೆ ಬರಲು ಸಾದ್ಯವೇ ಇದ್ದಿಲ್ಲಾ. ಆದರೆ ರಜತ ಪೀಠಸ್ಥನಾದ ಕೃಷ್ಣದೇವರು ತಮ್ಮ ಪ್ರೇರಣೆಯಿಂದಾ ಪೇಜಾವರ ಶ್ರೀಗಳು ಅನಾನುಕೂಲತೆಯನ್ನೆಲ್ಲ ಬದಿಗೆ ಸರಿಸಿ ಕಣ್ವ ಪೀಠದಿಂದಾ ರಜತಪೀಠದವರೆಗೆ ಅನಕೂಲದಸಿದ್ದಾಂತ ಸೂಚನೆ ಮಾಡಿಕೂಟ್ಟುಬಿಟ್ಟರು. ಈಪರ್ಯಾಯದ ನಿಮಿತ್ಯಗೂಸ್ಕರ ರಜತಪೀಠಕ್ಕೆ ಬಂದಶ್ರೇಯಸ್ಸಿಗೆ ಪೇಜಾವರಶ್ರೀಗಳೇ ಎಂದು ನಿಸ್ಸಂದೇಹವಾಗಿ ಹೇಳುತ್ತೆವೆ. ಮತ್ತು ಈಗ ತಮ್ಮಪ್ರವಚನದಲ್ಲಿ ಕಣ್ವಮಠದ ಬಗ್ಗೆ ತೂರ್ಪಡಿಸಿದ ಕಳಕಳಿಯಬಗ್ಗೆ ನಮಗೆ ಬಹಳೇ ಆನಂದವಾಗಿದೆ.ಈಗಿನ ವೇಳೆಯಲ್ಲಿ ನಮಗೆ ಇಲ್ಲಿಗೆ ಬರಲು ಸಾದ್ಯವೇ ಇದ್ದಿಲ್ಲಾ. ಆದರೆ ರಜತ ಪೀಠಸ್ಥನಾದ ಕೃಷ್ಣದೇವರು ತಮ್ಮ ಪ್ರೇರಣೆಯಿಂದಾ ಪೇಜಾವರ ಶ್ರೀಗಳು ಅನಾನುಕೂಲತೆಯನ್ನೆಲ್ಲ ಬದಿಗೆ ಸರಿಸಿ ಕಣ್ವ ಪೀಠದಿಂದಾ ರಜತಪೀಠದವರೆಗೆ ಅನಕೂಲದಸಿದ್ದಾಂತ ಸೂಚನೆ ಮಾಡಿಕೂಟ್ಟುಬಿಟ್ಟರು. ಈಪರ್ಯಾಯದ ನಿಮಿತ್ಯಗೂಸ್ಕರ ರಜತಪೀಠಕ್ಕೆ ಬಂದಶ್ರೇಯಸ್ಸಿಗೆ ಪೇಜಾವರಶ್ರೀಗಳೇ ಎಂದು ನಿಸ್ಸಂದೇಹವಾಗಿ ಹೇಳುತ್ತೆವೆ. ಮತ್ತು ಈಗ ತಮ್ಮಪ್ರವಚನದಲ್ಲಿ ಕಣ್ವಮಠದ ಬಗ್ಗೆ ತೂರ್ಪಡಿಸಿದ ಕಳಕಳಿಯಬಗ್ಗೆ ನಮಗೆ ಬಹಳೇ ಆನಂದವಾಗಿದೆ. ಮತ್ತು ಅವರು ಹೇಳಿದ ಪ್ರಕಾರ ಕಣ್ವಮಠ ಉಡುಪಿಗೆ ೯ನೇ ಮಠವಾದ ಮೇಲೆ ಕಣ್ವಮಠವಾದರೂ ಉಡುಪಿಪೀಠದ ಶ್ರೀಗಳವರು ಯಾವುದೇಕಾರ್ಯಕ್ರಮ ಕೈಗೂಳ್ಳಲು ಸದರ ಕಾರ್ಯಕ್ಕೆ ಹೆಗಲಿಗೆ ಹೆಗಲುಕೂಟ್ಟು ಸಹಕಾರ ನೀಡುವದರಲ್ಲಿ ತನ್ನ ಯೂಗ್ಯತೆಯ ಮಟ್ಟಿಗೆ ಕಣ್ವಮಠವು ಸದಾ ಸಿದ್ದವಾಗಿದೆ ಎಂದು ನಿಸ್ಸಂದೇಹವಾಗಿ ಹೇಳುವೆವು. ಮತ್ತು ಈವೇಳೆಯನ್ನು ನಮಗೆ ಮೀಸಲಾಗಿ ಕೂಟ್ಟ ಪೇಜಾವರ ಶ್ರೀಗಳವರಿಗೆ ಧನ್ಯವಾದಗಳನ್ನು ಅರ್ಪಿಸುವೆವು ಮತ್ತು ನಿಮ್ಮೆಲ್ಲರಿಗೂ ತನ್ನ ಕೃಪಾಬಲದಿಂದಾನಿಮ್ಮೆಲ್ಲರನ್ನು ಕಾಪಾಡಲೆಂದು ಶ್ರೀ ವಿಠಲಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ ನಮ್ಮಪ್ರವಚನ ಮುಗಿಸುವೆವು.) ಮತ್ತು ಮುಂದೆ ಮತ್ತೇ ಭಾಷಣಗಳಾದವು. ಅವರ ಪರಿಚಯವಿಲ್ಲದ ಮೂಲಕವಾಗಿ ಬರೆಯಲು ಸಾಧ್ಯವಾಗಲಿಲ್ಲಾ. ಸಭಾ ವಿಸರ್ಜನಾ ನಂತರ ಎಲ್ಲರೂ ತಮ್ಮ ಸ್ಥಾನಗಳಿಗೆ ಹೋದರು. ದಿ||೨೧-೦೧-೧೯೬೮ರಂದು ಮುಂಜಾನೆ ಸ್ನಾನಾನ್ಹೇಕಗಳು ಮುಉಗಿದಮೇಲೆ ಉಳಿದ ಜನರಿಗೆ ಮುದ್ರಾ ಹಾಕಲಾಯಿತು. ಮತ್ತು ಕರೆಯ ಬಂದ ಪ್ರಕಾರ ಎಲ್ಲಮಠಗಳಿಗೆ ಹೋಗಿಬರಲಾಯಿತು. ಕಾಣಿಕೆ ಕೂಡುವದು ಮರ್ಯಾದಾ ಮಾಡುವದು ಮುಗಿದಮೇಲೆ .ಎಲ್ಲ ಶ್ರೀಗಳ ಸನ್ನಿಧಾನದಲ್ಲಿ ಚೌಕಿಯಲ್ಲಿ ಭೋಜನ ಸಮಾರಂಭ ಮುಗಿದಮೇಲೆ ಪರತ ಹೂರಡುವ ತಯಾರು ಪ್ರಾರಂಭವಾಯಿತು. ಮತ್ತು ೪-೦೦ಘಂಟೆಗೆ ಪೇಜಾವರಶ್ರೀಗಳನ್ನು, ಭಂಡಾರಕೇರಿ ಶ್ರೀಗಳನ್ನು ಕರೆಸಲಾಯಿತು. ಸದರಿಯವರಿಗೆ ಫಲ ಪುಷ್ಪ ಕಾಣಿಕೆಯನ್ನು ಕೂಡಲಾಯಿತು. ಇಬ್ಬರಿಗೂ ರೂ೧೦೦/ ಕೂಡಲಾಯಿತು. ಮತ್ತು ಪುನ: ಪೇಜಾವರ ಶ್ರೀಗಳು ಒಂದು ಪೀತಾಂಬರ ರೂ೨೦೦/ ಫಲಪುಷ್ಪಗಳನ್ನು ನಮಗೆ ಕೂಟ್ಟರು. ಅಲ್ಲಿ ಬಂದ ಬ್ರಾಹ್ಮಣರಿಗೆ ಕಿಂಚಿತ ಸಂಭಾವನಾ ಕೂಡಲಾಯಿತು.
ಎಲ್ಲಕಾರ್ಯಗಳನ್ನು ಮುಗಿಸಿಕೂಂಡು ಶ್ರೀಗಳಿಂದಾ ನೀರೂಪ ತೆಗೆದುಕೂಂಡು ವಾದ್ಯವೈಭವಗಳಿಂದಾ ಬಂದು ಜೀಪಿನಲ್ಲಿ ಕುಳಿತುಕೂಂಡು ಎಲ್ಲರಿಗೂ ಮಂತ್ರಾಕ್ಷತೆ ಕೂಟ್ಟು ರೂ೧೦/ ಬಾಜಿವಗೈರೆಯವರಿಗೆ ಖುಷಿ ಕೂಟ್ಟು ಹೂರಟೆವು.

ಉಡುಪಿ ಯಾತ್ರೆ-೨

ಉಡುಪಿ ಯಾತ್ರೆ-೨
~~~~~~~~~~~~
ಉಡುಪಿಗೆ ಹೂರಡುವದು ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ (೧) ಮಂಗಳವಾರ ದಿ|| ೧೬-೦೧-೧೯೬೮ನೇ ದಿವಸ ಅಂತಾ ಠರಾವು ಆಯಿತು. ಎಲ್ಲಾ ರಾಯಚೂರ ಜಿಲ್ಹೆಯ ಶಿಷ್ಯರ ಸಹಾಯದಿಂದಾ ಒಂದು ಜೀಪು ಖರೀದಿ ಮಾಡಲಾಯಿತು. ಮತ್ತು ವೇ|| ದೇವರು ಡಾಕ್ಟರ ಒಂದು ಕಾರು ತೆಗೆದುಕೂಂಡು (೪೦) ಜನರಿಂದಾ ಕೂಡಿಕೊಂಡು ಹೋಗುವದು ತಯ್ಯಾರ ಮಾಡಲಾಯಿತು. ಉಳಿದ ಶಿಷ್ಯರು ತಮ್ಮ ಅನಕೂಲ ಪ್ರಕಾರ ಪರಭಾರೆ ಬರುವದಾಗಿ ತಿಳಿಸಿದರು. ನಮ್ಮ ಸಂಗಡ ಉಡುಪಿಗೆ ಬರಲು ಆತುರರಾದ ಶಿಷ್ಯರು (೫೦೦) ಆಗಬಹುದೆಂದು ಅಂದಾಜು ಮಾಡಲಾಯಿತು. ನಾವು ಉಡುಪಿಗೆ ಹೋಗುವದನ್ನು ಎಲ್ಲಾ ಪ್ರಮುಖ ಸ್ತಳಗಳಿಗೆ ಟಪಾಲುದ್ವಾರಾ ತಿಳಿಸಲಾಯಿತು. ನಮ್ಮ ಸಂಗಡ ಬರುವ ಎಲ್ಲರೂ ಪುಷ್ಯ ಶುದ್ಧ ೧೫ ಸೋಮವಾರ ದಿವಸ ಸಾಯಂಕಾಲಕ್ಕೆ ದೇವದುರ್ಗಕ್ಕೆ ಬರಬೇಕು ಅಂತಾ ತಿಳಿಸಲಾಯಿತು. ಆ ಪ್ರಕಾರ ಎಲ್ಲರೂ ಪೌರ್ಣಿಮಾ ಸಾಯಂಕಾಲಕ್ಕೆ ದೇವದುರ್ಗಕ್ಕೆ ಬಂದುಬಿಟ್ಟರು. ಪ್ರತಿಪದಾ ದಿವಸ ಮುಂಜಾನೆ ಪೊಜಾ, ತೀರ್ಥ, ಪ್ರಸಾದ ಮುಗಿಸಿಕೊಂಡು ಹಗಲು ೦೪-೦೦ ಘಂಟೆಗೆ ತನ್ನ ಮೊಲ ಪೀಠಕ್ಕೆ ಹೊಗಬೆಕೆಂಬ ಸತ್ಯ ಸಂಕಲ್ಪದ ಶ್ರೀ ಹರಿಯು ತನ್ನ ಭಕ್ತವ್ರಂದದೊಡನೆ ದೇವದುರ್ಗದಿಂದಾ ಹೊರಟುಬಿಟ್ಟನು. ಮೊದಲೇ ನಿಶ್ಚ್ಯಯ ಮಾಡಿದ ಪ್ರಕಾರ ಅವತ್ತು ಸಾಯಂಕಾಲಕ್ಕೆ ದೇಸಾಯಿ ಕ್ಯಾಂಪಿಗೆ ರಾತ್ರಿ ೦೯-೦೦ ಘಂಟೆಗೆ ಹೋಗಿ ಸಾಯಂಕಾಲದ ಮಂಗಳಾರತಿ ಫಲಹಾರ ವಗೈರೆ ಮುಗಿಸಿ ವಿಶ್ರಾಂತಿ ತೆಗೆದುಕೊಂಡು ಬೆಳಗಮುಂಜಾನೆ ೦೪-೦೦ ಘಂಟೆಗೆ ಎದ್ದು ಬುಧವಾರ ದಿವಸ ಮುಂಜಾನೆ ೦೯-೦೦ ಘಂಟೆಗೆ ಮುನಿರಾಬಾದಕ್ಕೆ ಬಂದೆವು. ಮುನಿರಾಬಾದನಲ್ಲಿ ಪಾದ ಪೊಜಾ,ಮತ್ತು ಸಂಜಾತಭಿಕ್ಷೆ ಮುಗಿಸಿಕೂಂಡು ೦೪-೦೦ಘಂಟೆಗೆ ಹೂರಟು ರಾತ್ರಿ ಹತ್ತು(೧೦-೦೦)ಘಂಟೆಗೆ ಹರಿಹರಕ್ಕೆ ಬಂದೆವು. ಅಲ್ಲಿ ಹರಿಹರ ದೇವರ ದರ್ಶನ ತೆಗೆದುಕೊಂಡು, ಮುಂದೆ ಸ್ವಲ್ಪದೂರ ಹೂಗಲು ಕಾರು ಕೆಟ್ಟು ನಿಂತಿತು. ಒಂದು ಜೀಪು,ಕಾರು ಅಲ್ಲೆ ಬಿಟ್ಟು ಶ್ರೀಗಳು, ಶೀನಪ್ಪಯ್ಯಾ, ವೇ||ವೆಂಕಪ್ಪಯ್ಯನವರು ಹಾಗೆ ಹೂರಟು ದಿ||೧೮-೦೧-೧೯೬೮ನೆ ಮುಂಜಾನೆ ಎಂಟು ಘಂಟೆಗೆ ಭಂಡಾರಕೇರಿಗೆ ಹೂದೆವು. ಅಲ್ಲಿಯ ವಿದ್ಯಮಾನ್ಯ ಶ್ರೀಗಳವರಿಂದಾ ಸ್ವಾಗತ ಸ್ವೀಕಾರಮಾಡಿಕೂಂಡು ಸ್ವಲ್ಪವೇಳೆ ವಿಶ್ರಾಂತಿ ತೆಗೆದುಕೂಂಡು, ಮುಂದೆ ಪೂಜಾ, ನೇವೇದ್ಯ, ತೀರ್ಥ, ಪ್ರಸಾದ ವಗೈರೆ ಎಲ್ಲ ಕಾರ್ಯಗಳನ್ನು ಮುಂದಿನ ಪ್ರಯಾಣ ನಿಮಿತ್ಯ ಗಡಿಬಿಡಿಯಿಂದಾ ಮುಗಿಸಲಾಯಿತು.
ಎಲ್ಲವೂ ಮುಗಿದಮೇಲೆ ಭಂಡಾರಕೇರಿ ಶ್ರೀಗಳವರು ಫಲ ಪುಷ್ಪದೂಂದಿಗೆ ರೂ೨೦೧=೦೦ ಕಾಣಿಕೆ ಸಲ್ಲಿಸಿದರು. ಅವರು ನಾವು ಕೂಡಿಕೂಂಡು ನಾಲ್ಕು ಘಂಟೆಗೆ ಉಡುಪಿಗೆ ಹೂಗಲು ಹೂರಟೆವು. ಹಗಲು ೦೫-೩೦ಘಂಟೆಗೆ ಉಡುಪಿಗೆ ಹೂದೆವು. ಅಲ್ಲಿ ಒಂದು ಗುಡಿಯಲ್ಲಿ ಇಳಿಯಲು ಸ್ಥಳಮಾಡಿದ್ದರು ಗುಡಿಯ ಮಹಡಿಯಲ್ಲಿ ವಿಶ್ರಾಂತಿ ಆಯಿತು. ಪೇಜಾವರ ದಿವಾನ ಸುಬ್ಬರಾಯಭಟ್ಟರು ಇನ್ನು ಸ್ವಲ್ಪ ವೇಳೆಯಲ್ಲಿ ಕರೆದುಕೂಂಡು ಹೋಗುವದಾಗಿ ಹೇಳಿಹೋದರು. ಮತ್ತು ಚಿತ್ತಪೂರ ಶ್ರೀಗಳವರು ಅಲ್ಲಿಗೆ ಬಂದರು. ಅಂತೂ ಮೂವರು ಶ್ರೀಗಳವರ ಸಂಗಮವಾಯಿತು. ತ್ರೀ ಸನ್ಯಾಸಿಗಳು ಒಳ್ಳೆ ಹರ್ಷೂದ್ಗಾರಗಳಿಂದಾ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತ ತಮ್ಮ ತಮ್ಮ ಮಠಗಳ ಆಡಳಿತ, ಕೇಳುತ್ತ ಹೇಳುತ್ತಾ ಒಳ್ಳೆ ಆನಂದದಲ್ಲಿ ಕಾಲಕ್ರಮೇಣ ಮಾಡಲಾಯಿತು. ನಾವು ಅಂದರೆ ಕಣ್ವ ಮಠದ ಶ್ರೀಗಳವರು ಬಂದ ವರ್ತಮಾನ ಎಲ್ಲಾಕಡೆಗೂ ಪಸರಿಸಿದ್ದರಿಂದಾ ನಮ್ಮ ಕಡಿಂದಾ ಮೂದಲೇ ನೀರೂಪತೆಗೆದುಕೂಂಡು ಬಂದ ಎಲ್ಲ ಶಿಷ್ಯ ಸಮೂಹವು ಬಂದು ನಮ್ಮನ್ನು ಕುಡಿಕೂಂಡಿತು. ರಾತ್ರಿ ಎಂಟು ಘಂಟೆ ಕಾಲಾವಧಿಯಲ್ಲಿ ಶ್ರೀಪೆಜಾವರ ಶ್ರೀಗಳಿಂದಾ ಮೆರವಣೆಗೆಗೋಸ್ಕರವಾಗಿ ವಿದ್ಯುದ್ವೀಪಗಳಿಂದ ಅಲಂಕರಿಸಿದ ಜೀಪು ಅಸಂಖ್ಯಲೈಟುಗಳು ವಾದ್ಯ ವೈಭವ ದ್ವಜಪತಾಕಗಳಿಂದಲು ಮತ್ತು ತಮ್ಮ ಪ್ರಮುಖ ಶಿಷ್ಯರನ್ನು ಕರೆಯಲು ಕಳಿಸಿಕೂಟ್ಟರು. ಸದರಿಯವರು ಫಲಪುಷ್ಪಗಳನ್ನು ಅರ್ಪಿಸಿ ನಮಸ್ಕಾರವಗೈರೆ ವಿಧಾನಗಳು ಮುಗಿದಮೇಲೆ ಮೂವರು ಶ್ರೀಗಳನ್ನು ಜೀಪದಲ್ಲಿ ಕೂಡ್ರಿಸಿ ಮೆರವಣಿಗೆಯು ಪ್ರಾರಂಭವಾಯಿತು. ವೈಕುಂಠದಲ್ಲಿ ನಮ್ಮ ಸ್ವಾಗತ, ಪೇಜಾವರ ಶ್ರೀಗಳವರು ಮಾಡುವರೆಂಬುದು ಎಲ್ಲವೂ ಮಿಥ್ಯವಾದದ್ದು. ರಜತ ಪೀಠಸ್ಥನಾದ ಶ್ರೀ ಹರಿಯು ತಾನೆ ವಿಠಲಕ್ರಿಷ್ಣನ ನಮಾಂಕಿತದಿಂದಾ ಕಣ್ವಪೀಠಕ್ಕೆಹೋಗಿದ್ದು ಎರಡುನೂರು ವರುಷದವರೆಗೂ ಇಲ್ಲಿಗೆ ಬರದೇ ಇದ್ದ ಮೂಲಕವಾಗಿ ಈಗ ತನ್ನ ಮೂಲಪಿಠಕ್ಕೆ ಬರಬೇಕೆಂಬ ಆತುರವಾಗಿ ವಿಠಲಕ್ರಿಷ್ಣನು ಇಲ್ಲಿಗೆ ಬರಲು ಪೀಠದಲ್ಲಿಯ ಕ್ರಿಷ್ಣನು ಸ್ವಾಗತಮಾಡುವದುಸಹಜವದೆ ಇಲ್ಲಿ ನಮಗೆ ಸ್ವಾಗತ ಮಾಡಿಸಿಕೂಳ್ಳಲು ಶಕ್ತರೇಅಲ್ಲ.
ಮುಂದೆ ಮಾರ್ಗದಲ್ಲಿ ಫಲಪುಷ್ಪ ಮಾಲಾರ್ಪಣೆ ಮತ್ತು ಮಂಗಳಾರತೆಗಳು ಆಗತಾಇದ್ದು ಅವುಗಳನ್ನೆಲ್ಲಾ ಅಂತರ್ಗತನಾದ ವಿಠಲಕ್ರಿಷ್ಣನ ಆಜ್ನಧಾರಕರಾಗಿ ಅವನಗೂಸಗ ಅವನ ಸೇವಕಭಾವದಲ್ಲಿ ಸ್ವೀಕರಿಸುತ್ತ ೧೦-೦೦ಘಂಟೆಗೆ ಸ್ವಾಗತ ಮಂಟಪಕ್ಕೆ ಹೂದೆವು ಅಲ್ಲಿ ಶ್ರೀ ಪೇಜಾವರ ಶ್ರೀಗಳವರು ಹಸ್ತಲಾಘವದಿಂದಾ ಮೂರು ಮಂದಿ ಶ್ರೀಗಳ ಸ್ವಾಗತ ಮಾಡಿದ ನಂತರ ಎಲ್ಲರೂ ಪಿಠಾರೋಹಣ ಮಾಡಿದರು. ಆಮೇಲೆ ಸ್ವಾಗತ ಭಾಷಣಗಳು ಮುಗಿದವು. ಎಲ್ಲರೂ ಶ್ರೀಪೇಜಾವರ ಶ್ರೀಗಳವರ ನಿರೂಪ ತೆಗೆದುಕೂಂಡು ತಮ್ಮ ತಮ್ಮಗೂಸ್ಕರ ಏರ್ಪಾಟು ಮಾಡಿದ ಸ್ಥಳಗಳಿಗೆ ಹೂಗಲಾಯಿತು. ತನ್ನ ಪೀಠದಿಂದಾ ೨೦೦ನೂರು ವರ್ಷಗಳ ಹಿಂದೆ ಕಣ್ವ ಪೀಠಕ್ಕೆ ಹೋದ ವಿಠ್ಠಲಕ್ರಿಷ್ಣನು ಒಳ್ಳೆ ವೈಭವದಿಂದಾ ಬಂದು ತನ್ನ ರಜತ ಪೀಠವನ್ನು ಅಲಂಕರಿಸಿ ತನ್ನ ಎಲ್ಲ ಭಕ್ತರನ್ನು ಪುನೀತರನ್ನಾಗಿ ಮಾಡಿದನು. ಇದು ಒಂದು ದೂಡ್ಡಸುಯೋಗವು. ಈ ಯೋಗಕ್ಕೆ ಸರ್ವೋತ್ತಮ ಯೋಗವೆಂದು ನಾಮ ರಹಸ್ಯದಿಂದಾ ಕರೆದೆವು. ನಮ್,ಅಗೆ ಕ್ರಿಷ್ಣದೇವರ ಒಳಬಾಗಿಲ ಮುಂದೆ ಮಹಡಿಯಮೇಲೆ ಇಳಿದುಕೋಳ್ಳಲು ಸ್ಥಾನ ಕಾಯ್ದಿರಿಸಾಲಾಗಿತ್ತು. ಮತ್ತು ಕನಕನ ಕಿಂಡಿಯ ಎಡಬಾಗದಲ್ಲಿ ದೇವತಾರ್ಚನೆ ವಗೈರೆ ಕಾರ್ಯಗಳಿಗೆ ಸ್ಥಳ ಮಾಡಲಾಗಿತ್ತು. ಆಪ್ರಕಾರ ಎಲ್ಲಾ ವ್ಯವಸ್ತೆ ಮಾಡಿಕೊಂಡು ರಾತ್ರಿ ಸ್ನಾನಾನ್ಹೇಕ ಮಂಗಳಾರತಿ ಫಲಹಾರ ವಗೈರೆ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿಗೂಸ್ಕರ ಎಲ್ಲರೂ ನಿದ್ರಾವಶರಾದರು. ದಿ|| ೧೯-೦೧-೧೯೬೮ನೇ ದಿವಸ ಭೋಜನ ಆದ ನಂತರ ಎಲ್ಲರೂ ವಿಶ್ರಾಂತಿ ತೆಗೆದುಕೂಂಡು ಉಡುಪಿಯಲ್ಲಿಯ ಪ್ರೇಕ್ಷಣೀಯ ಸ್ಥಾನವನ್ನು ದ್ರಿಗ್ಗೋಚರ ಮಾಡಲು ಎಲ್ಲರೂ ಹೋದರು. ನಾವು ಮಾತ್ರ ಎಲ್ಲಕಡೆಯಿಂದಾ ಬಂದ ಶಿಷ್ಯರು ದರ್ಶನಕ್ಕೆ ಬರುವದು ಅವರ ಕ್ಷೇಮಸಮಾಚಾರದಲ್ಲಿಯೇ ಅವತ್ತಿನ ದಿವಸ ಕಳೆಯಿತು. ಮತ್ತೆ ಸಾಯಂಕಾಲ ಸ್ನಾನ ಆನ್ಹೇಕ ಮಂಗಳಾರತಿ ವಿಶ್ರಾಂತಿಯಲ್ಲಿ ಈದಿನ ಉರುಳಿ ಹೋಯಿತು ದಿ||೨೦-೦೬-೧೯೬೮ನೇ ದಿವಸ ಪ್ರಾತ:ಸ್ನಾನ ವಗೈರೆ ಮುಗಿದಮೆಲೆ ಎಲ್ಲಕಡೆಯಿಂದಾ ಬಂದ ಕಣ್ವ ಶಾಖೆಯ ಶಿಷ್ಯರು ತಮಗೆ ಮುದ್ರಾಧಾರಣ ಬೇಕೆಂಬ ಸೂಚನೆ ಮಾಡಲು ಪ್ರಾರಂಭ ಮಾಡಿದರು.
ಅಲ್ಲಿ ಮುದ್ರಾದವಿಷಯವೇ ಇಲ್ಲದ್ದರಿಂದಾ ಈಗ ಪರ್ಯಾಯದ ಪೀಠಸ್ಥರಾದ ಶ್ರೀ ಪೇಜಾವರ ಶ್ರೀಗಳನ್ನು ವಿಚಾರ ಮಾಡಬೆಕೆಂಬ ನಿರ್ಣಯವಾಯಿತು. ಸದರ ವಿಚಾರಕ್ಕೂಸ್ಕರವಾಗಿ ವೇ||ಶೀನಪ್ಪಯ್ಯ ದೇವರು ಮತ್ತು ಪರೀಕ್ಷಿತರಾಜ ವೇ||ಗೋಪಾಲಾಚರ್ಯ ಇವರನ್ನು ಶ್ರೀಪೇಜಾವರ ಶ್ರೀಗಳ ಸನ್ನಿಧಾನಕ್ಕೆ ಕಳಿಸಲಾಯಿತು. ಆಕಾಲಕ್ಕೆ ಅಲ್ಲಿ ವಿಚಾರ ಮಾಡಿದ ವಿಷಯ ಈಗ ಕಣ್ವ ಶಾಖೆಯ ದ್ವೈತಸಿದ್ದಾಂತಕ್ಕೆ ಹೂಂದಿಕೂಂಡ ಶಿಷ್ಯರು ತಮಗೆ ನಮ್ಮ ಮಠದ ಶ್ರೀಗಳಿಂದಾ ತಪ್ತಮುದ್ರಾ ಧಾರಣ ಆಗಬೇಕೆಂಬ ಆತುರದ ಸೂಚನೆಯನ್ನು ಮಾಡಹತ್ತಿದ್ದರೆ. ಮತ್ತು ಐವತ್ತು ವರ್ಷದಲಾಗಾಯ್ತ ನಮಗೆ ನಮ್ಮ ಶ್ರೀಗಳ ದರ್ಶನವೇಇಲ್ಲಾ ತಪ್ತಮುದ್ರಾ ಧಾರಣವಿಲ್ಲದೇ ನಾವು ಬಳಲುತ್ತಿದ್ದೆವೆ, ಈಗ ಆ ಯೋಗವನ್ನು ಶ್ರೀವಿಠಲಕ್ರಿಷ್ಣನು ನಮಗೆ ತಂದುಕೂಟ್ಟಿದ್ದಾನೆ. ಎನಾದರೂ ಮಾಡಿ ನಮಗೆ ಮುದ್ರಾಧಾರಣ ಆಗಲೇಬೆಕೆಂದು ಎಲ್ಲಾ ಶಿಷ್ಯರು ಆತುರಪಡಹತ್ತಿದ್ದರೆ. ಅದಕ್ಕೂಸ್ಕರ ಶ್ರೀಗಳು ನಿಮ್ಮ ಕಡೆಗೆ ನಮ್ಮನ್ನು ಕಳಿಸಿದ್ದಾರೆ. 

Last part to be continued...






 

Sunday, June 23, 2013

ರಜತ ಪಿಠಾದಿಪತಿಯ ದರುಶನಕ್ಕೆ ವಿಠಲ ಕೃಷ್ಣನ ಪ್ರಥಮ ಪ್ರಯಾಣ - part1


!! ವಿಠಲ ಕೃಷ್ಣೋ ವಿಜಯತೆ !!
ರಜತ ಪಿಠಾದಿಪತಿಯ ದರುಶನಕ್ಕೆ ವಿಠಲ ಕೃಷ್ಣನ ಪ್ರಥಮ ಪ್ರಯಾಣ.

( ಶ್ರೀ ಶ್ರೀ ಶ್ರೀ ೧೦೮ ವಿದ್ಯಾತಪೋನಿಧಿ ತೀರ್ಥರ ಆತ್ಮ ಚರಿತ್ರೆಯ ಆಯ್ದ ಭಾಗ )

ನಮಗೆ ಉಡುಪಿಗೆ ಹೊಗಲು ದಿನೆ ದಿನೆ ಆತುರ ಹೆಚ್ಚಾಗ ಹತ್ತಿತು ಆದರೆ ನಮಗೆ ಅನಾನುಕುಲತೆಗೆ ಏನೂ ಕೊರತೆ ಇಲ್ಲದ ಪರಿಸ್ತಿತಿ. ಅನಾನುಕುಲತೆ ಅಂದರೆ ವಿಜಾಪೂರ ಜಿಲ್ಲಾ ಬಾಗೆವಾಡಿ ತಾಲ್ಲೂಕ ಪೈಕಿ ಕೃಷ್ಣಾ ದಂಡೆಯಲ್ಲಿ ಇರುವ ಒಂದು ಸಣ್ಣ ಹಳ್ಳಿಯಾದ ಬಳೂತಿಯಲ್ಲಿ ಜೋಷಿಯವರ ಅಂದರೆ ಶ್ರೀ ಜೀವಣಭಟ್ಟ ಮತ್ತು ಅವರ ಕುಟುಂಬ ಚಂದಾಬಾಯಿಯವರ ಉದರದಲ್ಲಿ ಹುಟ್ಟಿ ಬೆಳೆದು ಇದುವರೆಗೂ ಅಲ್ಲೇ ಕಾಲಗಳು ಗತಿಸಿ ಹೂದವು. ಆದರೆ ಪೊರ್ವಾಶ್ರಮದಲ್ಲಿ ಯಾವಾಗಲೂ ಈ ಪ್ರಾಂತಕ್ಕೆ ಬಂದಿಲ್ಲಾ. ಇಲ್ಲಿ ಯಾರದು ಪರಿಚಯವಿಲ್ಲಾ ಇಂಥ ಸ್ತಿತಿಯಲ್ಲಿ ನಾವು ದೇವದುರ್ಗಕ್ಕೆ ಬಂದು ಆಶ್ರಮತೆಗೆದುಕೂಂಡದ್ದು ಇಲ್ಲಿ ಸಾಧಾರಣವಾಗಿ ದೇವರು ವೆಂಕಪ್ಪಯ್ಯನವರು, ದೇವರು ವಕೀಲರು, ಪರೀಕ್ಷಿತರಾವ ವಕೀಲ, ರಾಜಪ್ಪಾ ಕಳಮಳ್ಳಿ, ಮತ್ತು ತೇಜಪ್ಪಾ ವೆಂಕಟಾಪೊರ ಇವರದು ಸಾಧಾರಣ ಪರಿಚಯ ಉಳಿದ ಯಾರದೂ ಪರಿಚವೇ ಇಲ್ಲಾ. ಆಶ್ರಮ ತೆಗೆದುಕೂಂಡು ಆರು(೬) ತಿಂಗಳ ಮಠದ ಆಸ್ತಿ ಬಗ್ಗೆ ಯಾವದು ಪರಿಚಯವಿಲ್ಲಾ. ಪ್ರತಿನಿತ್ಯ ನಮ್ಮ ಆತಿಥ್ಯ ಮಾತ್ರ ಯಾವಕೊರತೆ ಇಲ್ಲದೆ ವೆಂಕಪ್ಪಯ್ಯಾ ದೆವರು ಇವರ ಮನೆಯಲ್ಲಿ ನಡೆದು ಇದ್ದುದು ಇದು ದೂಡ್ಡ ಅನಕೂಲತೆ. ರೋಕ್ಕಕ್ಕೆ ನಮಗೆ ದರ್ಶನವೇ ಇಲ್ಲದಿರಲು ಆರ್ಥಿಕ ಪರಿಸ್ತಿತಿಯ ಬಗ್ಗೆ ಬರೆಯುವ ಕಾರಣವಿಲ್ಲಾ ಉಡುಪಿಗೆ ಹೊಗಲು ಆತುರತೆಯಷ್ಟು ಈ ಎಲ್ಲ ಕಾರಣ ಮೂಲಕವಾಗಿ ನಿರಾಶಯು ಬೆನ್ನ ಹತ್ತಿತು ಈ ಸ್ತಿತಿಯಲ್ಲಿ ಬಹಳೇ ಗೊಂದಲದಲ್ಲಿ ಬಿದ್ದುಬಿಟ್ಟೆವು. ಮುಂದೆ ವಿಚಾರ ತೊರದಂತಾಗಿ ಉದಾಸೀನರಾಗಬೆಕಾಯಿತು ಆದರೂ ಉದಾಸೀನದಲ್ಲಿ ಮನಸ್ಸು ಸ್ತಿರವಾಗಿಲಿಲ್ಲ. ನೀನು ಪ್ರಯತ್ನ ಮಾಡು ಅಂತಾ ಮನಸ್ಸಿಗೆ ವಿಠ್ಥಲ ಕೃಷ್ಣನ ಪ್ರೇರಣೆ ಆಗ ಹತ್ತಿತು, ಆದರೆ ಮೇಲೆ ಮೇಲೆ ಎಲ್ಲಕಡೆಯ ಶಿಷ್ಯರು ಬರತೊಡಗಿದರು, ಬಂದ ಎಲ್ಲ ಶಿಷ್ಯರಿಗೂ ನಾವು ಉಡುಪಿಗೆ ಹೋಗುವ ಸಮಾಚಾರದ ಪ್ರಸ್ತಾಪ ಮಾಡಲು ಪ್ರಾರಂಭ ಮಾಡಿದೆವು. ಏನೂ ಅಡ್ಡಿ ಇಲ್ಲಾ ಅನಕೂಲಮಾಡಿಕೂಂಡು ಹೊಗೇಬಿಡಬೆಕು ಎಂಬ ಹರ್ಷೋದ್ಗಾರಗಳು ಎಲ್ಲ ಶಿಷ್ಯರಿಂದಲೂ ಹೂರಬಿಳಹತ್ತಿದವು. ಆದರೂ ಕಾರ್ಯರೂಪಕ್ಕೆ ಬರುವದು ಕಠೀಣ ಅನಿಸುತಿತ್ತು. ಆದರೆ ಯಾವದೋ ಒಂದು ಕಾರ್ಯನಿಮಿತ್ತವಾಗಿ ಶೀನಪ್ಪಯ್ಯ ದೇವರು, ವಕೀಲ ಪರೀಕ್ಷಿತರಾಜ, ಭಿಮಾಚರ್ಯ ಡಾಕ್ಟರ, ಶ್ರೀ ರಾಮರಾವ ಸಿದ್ದಪೂರ, ಶ್ರೀಕೃಷ್ಟರಾವ ಸಿದ್ದಪೂರ, ವೇ|| ಗೋಪಾಲಾಚಾರ್ಯ ಕನಕಗಿರಿ, ನಾರಾಯಣರಾವ ವೆಂಕಟಾಪುರ, ರಾಜಪ್ಪ ಕಳಮಳ್ಳಿ, ವೇ|| ಅಚ್ಚಪ್ಪಯ್ಯಾ ದೇವರು ಡಾಕ್ಟರು, ಶ್ರೀ ಭೀಮರಾವ ದೆಸಾಯಿ ಮಲದಕಲ್ಲು, ಶ್ರೀ ರಾಮೇಶ್ವರಾವ ದೇಸಾಯಿ ಮಲದಕಲ್ಲು, ಸ್ತಳೀಕರು, ವೆ|| ವೆಂಕಪ್ಪಯ್ಯಾ ದೇವರು, ಶ್ರೀ ಅನಂತರಾಮರಾವ ವಗೈರೆ ದೇವದುರ್ಗದ ಶಿಷ್ಯ ಮಂಡಳಿ, ಏಲ್ಲರೂ ಕೂಡಿದ ವೇಳೆಯಲ್ಲಿ ಪರಮಾತ್ಮನ ಪ್ರೇರಣೆ ಮೇರೆಗೆ ಉಡುಪಿಗೆ ಹೋಗಬೆಕೆಂಬ ವಿಚಾರ ಏಲ್ಲಾಜನರಿಗೂ ತಿಳಿಸಲಾಯಿತು. ಏಲ್ಲರವಿಚಾರ ಪ್ರಾರಂಭವಾಗಿ ರೂಕ್ಕದ ಅನಕೂಲದ ಬಗ್ಗೆ ಶ್ರೀ ಮಾಧವತೀರ್ಥರ ಆಶ್ರಮವಾದಮೇಲೆ ಯಾರೂ ಹೂಗಿರುವದಿಲ್ಲಾ. ಅಲ್ಲಿಯ ಸ್ಥಿತಿಏನಾಗುವದೋ ಎಂಬ ಭುಗಿಲು ಇವುಗಳ ವಿಚಾರ ನಡೆದು ಎಷ್ಟೇ ಆತಂಕಗಳು ಬಂದರೂ ಧೈರ್ಯದಿಂದಾ ಎದುರಿಸಿ ಉಡುಪಿಗೆ ಹೋಗಿಯೇಬಿಡಬೆಕೆಂಬ ನಿಶ್ಚಯವಾಯಿತು. ಮತ್ತು ವಿಠಲಕೃಷ್ಣನು ಎಲ್ಲಶಿಷ್ಯರಿಗೆ ನಿವು ಶ್ರೀಗಳು ಸಹಿತಾ ಉಡುಪಿಗೆ ಬರಬೆಕೆಂದು ಎಲ್ಲಶಿಷ್ಯರ ಕಿವಿ ಯಲ್ಲಿ ಊದಿಬಿಟ್ಟನು. ಅದರಿಂದಾ ಎಲ್ಲಕಡೆಗೂ ಉಡುಪಿಗೆ ಹೋಗುವ ವಿಚಾರವೇ ವಿಚಾರ. ಹಿಗಾಗಿ ಎಲ್ಲರಿಗೂ ಉಡುಪಿಗೆ ಹೋಗಬೆಕೆಂಬ ಆತುರತೆಯು ಹೆಚ್ಚಾಗಿಬಿಟ್ಟಿತು. ಆದರೆ ಮತ್ತೇ ಒಂದು ಸಂಕೋಚವು ತಲೆದೂರಹತ್ತಿತು. ನಮ್ಮ ಪೀಠದಶ್ರೀಗಳನ್ನು ಕರೆದುಕೊಂಡುಹೊಗಬೆಕಾದರೆ ಉಡಪಿ ಪಿಠದವರಿಂದಾ ಆಮಂತ್ರಣವಿಲ್ಲದೆ ಹಾಗೆ ಹೊಗುವದು ಹೇಗೆ? ಎಂಬ ವಿಚಾರವು ಬಲವತ್ತಾಗಿ ಎದುರಿಗೆ ಬಂದು ನಿಂತಿತು.


ಮುಂದೆ ದೆವರ ಕೃಪೆಯಿಂದಾ ಅದರ ಪರಿಹಾರವಾಯಿತು. ಶ್ರೀಶ್ರೀಶ್ರೀ ವಿಶ್ವೇಶತೀರ್ಥ ಪೆಜಾವರ ಉಡುಪಿ ಮಠ ಶ್ರೀ ಪಾದಂಗಳವರು ಪರ್ಯಾಯದ ಸಂಚಾರ ನಿಮಿತ್ಯವಾಗಿ ರಾಯಚೂರಿಗೆ ಬಂದಾಗ್ಗೆ ವೇ|| ಶೀನಪ್ಪಯ್ಯದೇವರು ವಕೀಲರ ಮನೆಯಲ್ಲಿ ಸಂಜಾತ ಭಿಕ್ಷಾದ ದಿವಸ ಮನೆಯಲ್ಲಿ ಕೊತ ವೇಳೆಯಲ್ಲಿ ಅಕಸ್ಮಾತ ಕಣ್ವ ಮಠದ ಬಗ್ಗೆ ವಿಚಾರ ನಡೆದು ದೇವರು ವಕೀಲರಿಂದಾ ಎಲ್ಲ ಸಮಾಚರ ತಿಳಿದುಕೊಂಡು ಈ ವರ್ಷ ನಾನು ಪರ್ಯಾಯ ಪಿಠಾರೋಹಣ ಮಾಡಿದಮೇಲೆ ನೀವು ಕಣ್ವಮಠದ ಶ್ರೀಗಳನ್ನು ಕರೆದುಕೊಂಡು ಬರಲೇಬೇಕು ಎಂದು ಆಮಂತ್ರಣ ಕೊಟ್ಟು ನಾನು ಉಡುಪಿಗೆ ಹೋದಮೇಲೆ ಕರೆದುಕೊಂಡು ಬರತಕ್ಕ ದಿವಸ ಮತ್ತು ವೇಳೆ ಎಲ್ಲವನ್ನು ಟಪಾಲುದ್ವಾರಾ ತಿಳಿಸಲಾಗುವದೆಂದು ಹೇಳಿಹೊದರು. ದಿನಾಂಕ, ದಿವಸ, ಆಮಂತ್ರಣ ಪತ್ರದಲ್ಲಿ ಎಲ್ಲವನ್ನು ತಿಳಿಸಿ ನಿಮ್ಮ ಮಠದ ಗೌರವಕ್ಕೆ ಏನೂ ನ್ಯೂನ್ಯತೆ ಬಾರದಂತೆ ನೋಡಿಕೊಳ್ಳುವೆವು ಎಂದು ಒಳ್ಳೆ ಆಗ್ರಹದ ಆಮಂತ್ರಣ ಪತ್ರ ಕಳಿಸಿದರು ಮತ್ತು ಮುಂದೆ ತಮ್ಮ ಸಂಚಾರದಲ್ಲಿ ಕಣ್ವಮಠದ ಶ್ರೀಗಳವರು ಉಡುಪಿಗೆ ಬರುತ್ತಾರೆ ಅಂತಾ ಎಲ್ಲಕಡೆಯಲ್ಲಿ ಪ್ರಚಾರ ಮಾಡಿದರು. ಅದರಿಂದಾ ಎಲ್ಲಕಡೆಗೆ ಆನಂದವೇ ಆನಂದ. ಪಿಠ ಸ್ತಾಪಿತರಾದ ಶ್ರೀ ಮನ ಮಾಧವತೀರ್ಥರು ಆಶ್ರಮ ತೆಗೆದುಕೂಂಡು ಬಂದ ಮೇಲೆ ಯಾರೂ ಹೋಗಿಲ್ಲಾ ಈಗ ಯೋಗಪ್ರಾಪ್ತವಾದದ್ದು ಬಹಳೇ ಸುಯೊಗ. ಎಲ್ಲಶಿಷ್ಯರಲ್ಲಿಯೂ ಉಡುಪಿಗೆ ಹೋಗೆತೀರಬೆಕೆಂಬ ಆತುರತೆಯು ಉತ್ಪನ್ನವಾಗಿ ತಾವು ಉಡುಪಿಗೆ ಬರುವ ನಿರ್ದಾರವನ್ನು ನಮ್ಮ ದರ್ಶನದದ್ವಾರಾ ತಿಳಿಸಿ ಹೂಗಹತ್ತಿದರು. ಎಲ್ಲ ಕಡೆಗೂ ಉಡುಪಿಗೆ ಹೋಗುವ ಗೂಂದಲವೇ, ಗೂಂದಲ ನಡೆಯಿತು. ಮುಂದೆ ಶೀನಪ್ಪಯ್ಯನವರು ತಮ್ಮ ಸಹಕಾರಿಗಳೂಂದಿಗೆ ಬಂದು ಶ್ರೀ ಪೇಜಾವರ ಶ್ರೀಗಳವರ ಕಡೆಯಿಂದಾ ಆಮಂತ್ರಣ ತೋರಿಸಿ ಉಡುಪಿಗೆ ಹೋಗುವ ಮಿತಿಯನ್ನು ನಿಶ್ಚ್ಯಯಿಸಿಕೂಂಡು ಹೂದರು.ಮುಂದೆ ಸ್ವಲ್ಪು ದಿವಸದಲ್ಲಿ ಶ್ರೀ ವಿದ್ಯಮಾನ್ಯ ತೀರ್ಥ ಭಂಡಾರ್ಕೇರಿ ಶ್ರೀಗಳವರು ರಾಯಚೂರಿಗೆ ಆಗಮಿಸಿದ್ದಾಗ್ಗೆ ವೆ|| ಶೀನಪ್ಪಯ್ಯ ದೇವರು ಇವರಿಂದಾ ಕಣ್ವಮಠದ ಶ್ರೀಗಳು ಉಡುಪಿಗೆ ಹೋಗುವ ನಿಶ್ಚ್ಯಯ ತಿಳಿದುಕೂಂಡರು ಮತ್ತು ಶ್ರೀ ಪೇಜಾವರ ಶ್ರೀಗಳಿಂದಾ ಬಂದ ಆಮಂತ್ರಣ ಪತ್ರದ ಅವಲೂಕನ ಮಾಡಲಾಗಿ ಅದರಲ್ಲಿ ಬರೆದ ವಿಷಯ ನಾವು(ಪೆಜಾವರಶ್ರೀಗಳವರು) ದಿ||೧೮-೧೦-೧೯೬೯ ಮುಂಜಾನೆ ಪರ್ಯಾಯದ ಪತ್ತವೇರುತ್ತೆವೆ, ಆಮೇಲೆ ಪೂರ್ಣ ಅಧಿಕಾರ ನಮಗೆ ಪ್ರಾಪ್ತವಾಗುತ್ತದೆ. ಅದೇ ದಿವಸ ಸಾಯಂಕಾಲಕ್ಕೆ ನೀವು ಉಡುಪಿಗೆ ಆಗಮಿಸಬೇಕು ಅಂದರೆ ನಿಮ್ಮ ಗೋಸ್ಕರ ಎಲ್ಲ ಕಾರ್ಯಗಳು ಮಾಡಲು ನಾವು ಸ್ವತಂತ್ರರಾಗುತ್ತೇವೆ. ಅದರಒಳಗಡೆ ನಿಮ್ಮ ಆಗಮನವಾದಲ್ಲಿ ನಮಗೆ ಕಾರ್ಯಮಾಡಲು ಪೊರ್ಣಸ್ವತಂತ್ರ ಇರುವದಿಲ್ಲಾ. ಅದಕ್ಕೊಸ್ಕರವಾಗಿ ನೀವು ನಿಮ್ಮ ಶಿಷ್ಯಮಂಡಳಿ ಸಹಿತ ಆಗಮಿಸಿ ಕ್ಷೇತ್ರ ಪ್ರವೇಶ ಮಾಡಬೇಕು ಅಂತಾ ಕಳಿಸಿದ ಆಮಂತ್ರಣ ಪತ್ರವನ್ನು ನೀರೀಕ್ಷಿಸಿ ಸದರ ಶ್ರೀ ಭಂಡಾರಕೇರಿ ಶ್ರೀಗಳವರು ನೀವು(ಶೀನಪ್ಪಯ್ಯಗೆ) ಶ್ರೀಕಣ್ವಮಠದ ಶ್ರೀಗಳನ್ನು ಕರೆದುಕೂಂಡು ದಿ||೧೮-೦೧-೧೯೬೯ನೇ ದಿವಸ ಮುಂಜಾನೆ ಭಂಡಾರಕೇರಿಗೆ ಬರಬೇಕು ಅಲ್ಲಿ ಪೂಜಾ, ತೀರ್ಥ, ಪ್ರಸಾದ ತೀರಿಸಿಕೂಂಡು ನಾವು ನೀವು ಸಂಘಟಿತರಾಗಿ ಉಡುಪಿಗೆ ಹೋಗೋಣ ಎಂಬ ತಮ್ಮ ಅಭಿಪ್ರಾಯದ ಆಮಂತ್ರಣಕೂಟ್ಟು ನಮಗೆ ಆಮಂತ್ರಣ ಪತ್ರ ಕಳಿಸಿಕೂಟ್ಟು ಶ್ರೀಗಳವರು ಭಂಡಾರಕೇರಿಗೆ ಹೋದರು. ಇವು ಇಲ್ಲಿ ವಿಚಾರಗೋಷ್ಟಿ ನಡೆದಕಾಲಕ್ಕೆ ನಾವು ದೇವದುರ್ಗದಲ್ಲಿ ವೆ||ವೆಂಕಪ್ಪಯ್ಯಾದೇವರಮನೆಯಲ್ಲಿಯೇ ಇದ್ಯವು. ನಮಗೆ ಎಲ್ಲಾ ವಿಚಾರದಲ್ಲಿಯೂ, ಮತ್ತು ಕಾರ್ಯದಲ್ಲಿಯೂ ಒಳ್ಳೇ ಸಹಕಾರಿಯಾಗಿದ್ದರು. ನಿರಾಧಾರ,ನಿರಾಶೆ ಇದ್ದ ವೇಳೆಯಲ್ಲಿ ಉಡುಪಿಗೆ ಹೂಗಬೆಕೆಂಬ ಪ್ರೇರಣೆ ಮಾಡಿ ನಾಟಕ ಪ್ರಾರಂಭ ಮಾಡಿದ ಶ್ರೀಹರಿಯು ಈ ಷ್ಟೇಜಿಗೆ ತಂದ ಶ್ರೀ ಹರಿಯು ತನ್ನ ಸಂಕಲ್ಪದ ಪ್ರಕಾರ ಉಡುಪಿಗೆ ಹೋಗುವದನ್ನು ನಿಶ್ಚಿತಮಾಡೇಬಿಟ್ಟನು.



.






 

Monday, June 10, 2013

ನಮಸ್ಕಾರ ಎಂದರೆ ಎನು? ಹೇಗೆ ?

ನಮಸ್ಕಾರ ಎಂದರೆ ಎನು? ಹೇಗೆ ?

 ನಮಸ್ಕಾರ ಎನ್ನುವ ಪದವು ಸಂಸ್ಕೃತ ಭಾಷೆಯ ಒಂದು ಪದ. ಈ ಪದವನ್ನು ಬಿಡಿಸಿದಾಗ ನಮಸ್ | ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ದೊರೆಯುತ್ತವೆ. ಇದು `ಣಮು ಪ್ರಹ್ವತ್ವೇ ಶಬ್ದೇ ಚ` ಎನ್ನುವ ಧಾತುವಿನಿಂದ ಉತ್ಪನ್ನವಾಗಿದೆ. ನಮಸ್ ಎಂದರೆ ಪ್ರಹ್ವತೆ. ಧಾತುವಿನಲ್ಲಿರುವ ಪದಗಳ ಅರ್ಥವನ್ನು ನೋಡಿದಾಗ ನಾವು ನಮಸ್ಕಾರ ಎನ್ನುವ ಪ್ರಕ್ರಿಯೆಯನ್ನು ಮಾಡುವಾಗ ನಮ್ಮ ದೇಹವನ್ನು ಬಾಗಿಸಿರಬೇಕು ಮತ್ತು ಮನಸ್ಸೂ ಸಹ ಬಾಗಿರಬೇಕು ಎನ್ನುವ ಅರ್ಥ ಸಿಗುತ್ತದೆ. ಅಂದರೆ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹಬಾಗಿದ್ದರೆ ಮಾತ್ರ ಸಾಲದು. ದೇವದೇವನ ಮುಂದೆ ನಮ್ಮ ಮನಸ್ಸೂ ಬಾಗಿದ್ದು, ಅವನ ಮಹಿಮೆಗಳು ಶಬ್ದರೂಪ ಸ್ತೋತ್ರದ ಮೂಲಕ ಹೊರಬರುತ್ತಿರಬೇಕು.
 ಇದೇ ಮಾತನ್ನು ಶ್ರೀಮಜ್ಜಯತೀರ್ಥರು ತಮ್ಮ ಸುಧಾಗ್ರಂಥದಲ್ಲಿ `ಮನೋವೃತ್ತೇಃ ತತ್ಪ್ರವಣತಾ ಹಿ ವಂದನಮ್` ಎಂದಿದ್ದಾರೆ. ಹೀಗೆ ನಮಸ್ಕಾರ ಮಾಡುವುದು ಮನಸ್ಸಿನಿಂದ, ಕೇವಲ ಅಡ್ಡಬೀಳುವುದೇ ನಮಸ್ಕಾರವಲ್ಲ. ನಾವು ಪೂಜಾವಸಾನದಲ್ಲಿ ಹೇಳುವ `ನಾಹಂ ಕರ್ತಾ ಹರಿ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್` ಎನ್ನುವ ಮಾತಿನಂತೆ ಯಾವುದೇ ಕಾರ್ಯ ನಮ್ಮಿಂದಾದರೆ ನಿಜವಾಗಿಯೂ ಆ ಕಾರ್ಯ ನಮ್ಮಿಂದಾದುದಲ್ಲ. ಭಗವಂತನಿಂದಲೇ ಆದದ್ದು ಎನ್ನುವ ಭಾವನೆಯೇ ನಮಸ್ಕಾರ. ಅಲ್ಲದೇ! ನಮಸ್ಕಾರವನ್ನು ಮಾಡಿದಾಗ ನಮ್ಮ ದೇಹದ ಭಾರ ವನ್ನು ಭೂವರಾಹನ ಮೇಲೆ ಹಾಕಿ ಆತ್ಮವನ್ನು ನಿವೇದಿಸಬೇಕಾದರೆ `ನಾಹಂ ಕರ್ತಾ` ಎನ್ನುವ ಅನುಸಂಧಾನವಿರಲೇಬೇಕು. ಇಲ್ಲದಿದ್ದಲ್ಲಿ ದೇಹವನ್ನು ಮಾತ್ರ ಭೂಮಿಯ ಮೇಲೆ ಬೀಳಿಸಿದಂತಾ ಗುತ್ತದೆ. ಆತ್ಮನಿವೇದನೆ ಮಾಡಿದಂತಾಗುವುದಿಲ್ಲ.
 ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
 ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||

ಎನ್ನುವ ನವವಿಧ ಭಕ್ತಿ ಯಲ್ಲಿ ಆತ್ಮನಿವೇದನೆ ಸೇರಿದಂತೆ ವಂದನವೂ ಸೇರಿದೆ. ಈ ವಂದನದ ಮೂಲಕ ಭಗವಂತನಲ್ಲಿ ಸ್ನೇಹವನ್ನು ಸಂಪಾದಿಸಿ, ಅವನ ದಾಸರಾಗಿ, ಅವನ ಉತ್ಕರ್ಷವನ್ನು ಒಪ್ಪಿಕೊಂಡು ಅವನಿಗೆ ನಮ್ಮ ಆತ್ಮನಿವೇದನೆಯನ್ನು ಮಾಡುವುದರ ಮೂಲಕ ನಮ್ಮ ಒಳಿತು-ಕೆಡಕುಗಳಿಗೆ ಆ ಭಗವಂತನೇ ಕಾರಣ ಎನ್ನುವ ಅನುಸಂಧಾನದ ಮೂಲಕ ಮನಸ್ಸನ್ನು ನಮ್ರವಾಗಿಸುವುದೇ ನಮಸ್ಕಾರದ ಪ್ರಕ್ರಿಯೆ.

ನಮಸ್ಕಾರದಲ್ಲಿ ಎಷ್ಟು ವಿಧಗಳು:
 ನಮಸ್ಕಾರವು `ಕಾಯಿಕ, ವಾಚಿಕ, ಮಾನಸಿಕ` ಎಂದು ಮೂರು ವಿಧವಾಗಿದೆ. ದೇಹ ದಿಂದ ಮಾಡುವ ನಮಸ್ಕಾರವು `ಕಾಯಿಕ(ದೈಹಿಕ) ನಮಸ್ಕಾರ` ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು `ವಾಚಿಕ ನಮಸ್ಕಾರ`, ಮನಸ್ಸಿನ ಮೂಲಕ ಮಾಡುವ ನಮಸ್ಕಾರವು `ಮಾನಸಿಕ ನಮಸ್ಕಾರ` ಎಂದು ಕರೆಸಿಕೊಳ್ಳುತ್ತದೆ. ಈ ಮೂರು ವಿಧವಾದ ನಮಸ್ಕಾರಗಳು ಸೇರಿದಾಗ ಮಾತ್ರ ಅದು `ಉತ್ತಮ ನಮಸ್ಕಾರ` ಎಂದೆನಿಸಿಕೊಳ್ಳುತ್ತದೆ. ಇದನ್ನೇ `ತ್ರಿಕರಣ ಪೂರ್ವಕ ನಮಸ್ಕಾರ` ಎನ್ನುತ್ತಾರೆ. ಈ ಮೂರು ವಿಧದ ನಮಸ್ಕಾರಗಳಲ್ಲಿ `ಕಾಯಿಕ ನಮಸ್ಕಾರವು ಉತ್ತಮ. ವಾಚಿಕ ನಮಸ್ಕಾರವು ಅಧಮ. ಮಾನಸಿಕ ನಮಸ್ಕಾರವು ಮಧ್ಯಮ` ಎಂದು ವಿಭಾಗ ಮಾಡಲಾಗಿದೆ
 ಕಾಯಿಕ ವಾಗ್ಭವಶ್ಚೈವ ಮಾನಸಸ್ತ್ರಿವಿಧಸ್ಸ್ಮೃತಃ|
 ನಮಸ್ಕಾರಸ್ತು ತತ್ವಜ್ಞೈಃ ಉತ್ತಮಾಧಮಮಧ್ಯಮಾಃ ||

ಎಂಬುದಾಗಿ.  ಕಾಯದಿಂದ ಮಾಡುವ ನಮಸ್ಕಾರಗಳಲ್ಲಿ ಪುನಃ ಮೂರುವಿಧಗಳಿವೆ. `ಕಾಯಿಕ ಉತ್ತಮ, ಕಾಯಿಕ ಮಧ್ಯಮ, ಕಾಯಿಕ ಅಧಮ` ಎಂಬುದಾಗಿ. ಕಾಯಿಕ ಉತ್ತಮ ನಮಸ್ಕಾರದ ವಿಧವನ್ನು ಹೇಳುತ್ತಿದ್ದಾರೆ 

 
 ಪ್ರಸಾರ್ಯ ಪಾದೌ ಹಸ್ತೌ ಚ ಪತಿತ್ವಾ ದಂಡವತ್ ಕ್ಷಿತೌ |
 ಜಾನುಭ್ಯಾಂ ಧರಣೀಂ ಗತ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |
 ಕ್ರಿಯತೇ ಯೋ ನಮಸ್ಕಾರಃ ಉತ್ತಮಕಾಯಿಕಸ್ತು ಸಃ ||

ಎಂಬುದಾಗಿ.

ಕಾಯಿಕ ಉತ್ತಮ:
 ಭೂಮಿಯಲ್ಲಿ ದಂಡಾಕಾರವಾಗಿ ಮಲಗಿ, ಹಸ್ತ, ಪಾದಗಳನ್ನು ಚಾಚಿ, ಮಂಡಿ, ತಲೆಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಾ, ನಮ್ಮ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂತನಲ್ಲಿ ನೆಟ್ಟು ಮಾಡುವ ನಮಸ್ಕಾರವೇ `ಕಾಯಿಕ ಉತ್ತಮ ನಮಸ್ಕಾರ.` ಈ ರೀತಿಯ ನಮಸ್ಕಾರವನ್ನು ಪುರುಷರು ಮಾತ್ರ ಮಾಡಬೇಕು. 

ಕಾಯಿಕ ಮಧ್ಯಮ:
 ಮಂಡಿಗಳನ್ನು ಭೂಮಿಯಲ್ಲಿ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂಕನ ರೂಪದಲ್ಲಿಟ್ಟು ಮಾಡುವ ನಮಸ್ಕಾರವೇ `ಕಾಯಿಕ ಮಧ್ಯಮ` ಎಂದೆನಿಸಿಕೊಳ್ಳುತ್ತದೆ.
 ಜಾನುಭ್ಯಾಂ ಚ ಕ್ಷಿತಿಂ ಸ್ಪೃಷ್ಟ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |
 ಕ್ರಿಯತೇ ಯೋ ನಮಸ್ಕಾರಃ ಮಧ್ಯಮಃ ಕಾಯಿಕಸ್ತು ಸಃ ||

ಎಂದು ಹೇಳಿ ಈ ನಮಸ್ಕಾರವನ್ನು ಸ್ತ್ರೀಪುರುಷರಿಬ್ಬರೂ ಮಾಡಬಹುದೆಂದು ಹೇಳಿ, ಮುಂದೆ ಕಾಯಕ ಅಧಮ ನಮಸ್ಕಾರದ ರೀತಿಯನ್ನು  ಹೇಳುತ್ತಿದ್ದಾರೆ

ಕಾಯಿಕ ಅಧಮ:
 ಪುಟೀಕೃತ್ಯ ಕರೌ ಶೀರ್ಷೇ ದೀಯತೇ ಯದ್ಯಥಾ ತಥಾ |
 ಅಸ್ಪೃಷ್ಟ್ವಾ ಜಾನುಶೀರ್ಷಾಭ್ಯಾಂ ಕ್ಷಿತಿಂ ಸೋಡಧಮ ಉಚ್ಯತೇ ||

ಮಂಡಿ ಮತ್ತು ತಲೆ ಯನ್ನು ಭೂಮಿಗೆ ತಾಗಿಸದೇ, ಕೈಯನ್ನು ತಲೆಯಲ್ಲಿಟ್ಟು ಮಾಡುವ ನಮಸ್ಕಾರವು ಕಾಯಕ ಅಧಮ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ.
 ಇಲ್ಲಿ ಒಂದು ಪ್ರಶ್ನೆ ಬರುತ್ತದೆ ಎನೆಂದರೆ? 
 ಕಾಯಕ ಉತ್ತಮದ ನಮಸ್ಕಾರವನ್ನು ಪುರುಷರು ಮಾತ್ರ ಎಕೆ ಮಾಡಬೇಕು, ಸ್ತ್ರೀಯರು ಎಕೆ ಮಾಡಬಾರದು ಎಂಬುದಾಗಿ? ಅದಕ್ಕೆ ಉತ್ತರವನ್ನು ಈ ರೀತಿ ಹೇಳುತ್ತಿದ್ದಾರೆ.    

ಬ್ರಾಹ್ಮಣಸ್ಯ ಗುದಂ ಶಂಖಂ ಯೋಷಿತಃ ಸ್ತನಮಂಡಲಮ್ |
ರೇತಃ ಪವಿತ್ರಗ್ರಂಥಿಂ ಚ ನ ಭೂಃ ಧಾರಯಿತುಂ ಕ್ಷಮಾ ||

ಎನೆಂದರೆ ಇಡೀ ಭೂ ಮಂಡಲದ ಭಾರವನ್ನು ಹೊತ್ತಿರುವ ಭೂದೇವಿಯು ಬ್ರಾಹ್ಮಣರ ಗುದಪ್ರದೇಶವನ್ನು, ಶಂಖವನ್ನು, ಸ್ತ್ರೀಯರ ಸ್ತನಮಂಡಲವನ್ನು, ಶುಕ್ಲರೂಪದಲ್ಲಿರುವ ರೇತಸ್ಸನ್ನು, ಧಭರ್ೆಯ ಗ್ರಂಥಿಯನ್ನು ಧರಿಸ ಲಾರಳಂತೆ. ಆದುದರಿಂದ ಸ್ತ್ರೀಯರು ಕಾಯಕ ಉತ್ತಮ ನಮಸ್ಕಾರವನ್ನು ಮಾಡಬಾರದೆಂದು ತಿಳಿಸುತ್ತಾ ಇದನ್ನು ಕೇವಲ ಪುರುಷರಿಗೆ ಮಾತ್ರ ವಿಧಾನ ಮಾಡಿರುವರು. ಅಲ್ಲದೇ! ಪುರುಷರು ಆಸನವಿಲ್ಲದೇ ನೆಲದ ಮೇಲೆ ಕುಳಿತುಕೊಳ್ಳಬಾರದೆಂದೂ ಕೂಡ ವಿಧಾನ ಮಾಡಿರುವರು.


ಪ್ರಣಾಮ ಎಂದರೇನು?
 `ಸ್ವಾಪಕರ್ಷಬೋಧಕ, ಪರೋತ್ಕರ್ಷಬೋಧಕ ಕಾಯಕವ್ಯಾಪಾರಃ ನಮಸ್ಕಾರಃ` ಎನ್ನುವ ದುರ್ಗಾದಾಸನ ಮಾತಿನಂತೆ ಪ್ರಣಾಮವೆಂದರೆ ನಮಗಿಂತ ಹಿರಿಯರ ಮುಂದೆ ನಾನು ಅಲ್ಪ ಎನ್ನುವ ಭಾವನೆಯನ್ನು ಪ್ರತಿಬಿಂಬಿಸುವ ದೈಹಿಕ ವ್ಯಾಪಾರದ ಅನುಸಂಧಾನವೇ ನಮಸ್ಕಾರ ವೆಂದು ಗೊತ್ತಾಗುತ್ತದೆ. ಅಲ್ಲದೇ! ಮೇಲೆ ತಿಳಿಸಿದಂತೆ ಕಾಯವನ್ನು ಭೂಮಿಯಲ್ಲಿ ಬೀಳಿಸಿ, ತಲೆ ಯ ಮೇಲುಗಡೆ ಗುಣಾಕಾರದ ಚಿಹ್ನೆ( ) ಯಂತೆ ಎಡಕೈಯ ಮೇಲೆ ಬಲಕೈ ಬರುವಂತೆ ಮಾಡಿ, ನಮ್ಮ ಬಲಕೈ ಭಗವಂತನ ಬಲಪಾದವನ್ನು, ನಮ್ಮ ಎಡಕೈ ಭಗವಂತನ ಎಡಪಾದವನ್ನು ಮುಟ್ಟು ವಂತೆ ಮಾಡುವ ನಮಸ್ಕಾರವೇ ಪ್ರಣಾಮ ಎಂಬುದಾಗಿ ಕಾಲಿಕಾ ಖಂಡವು ಈ ರೀತಿಯಾಗಿ ತಿಳಿಸುತ್ತಿದೆ

 ಅಯಮೇವ ನಮಸ್ಕಾರಃ ದಂಡಾದಿಪ್ರತಿಪತ್ತಿಭಿಃ|
 ಪ್ರಣಾಮ ಇತಿ ಜ್ಞೇಯಃ ಸ ಪೂರ್ವಪ್ರತಿಪಾದಿತಃ ||

ಎಂಬುದಾಗಿ. ಇಂತಹ ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.
 ಇಂತಹ ನಮಸ್ಕಾರದಲ್ಲಿ ಪುನಃ ನಾಲ್ಕುವಿಧಗಳಿವೆ. ಅವುಗಳೆಂದರೆ (1) ಭಕ್ತಿಪೂರ್ವಕ ನಮಸ್ಕಾರ (2) ಅಷ್ಟಾಂಗ ನಮಸ್ಕಾರ (3) ಪಂಚಾಂಗ ನಮಸ್ಕಾರ (4) ಅಭಿವಾದನ ಎಂಬುದಾಗಿ.

To be continued...